ಎಡರಂಗ ಸರಕಾರದ ಮದ್ಯ ನೀತಿ ವಿರುದ್ಧ ಐಕ್ಯರಂಗ ಪ್ರತಿಭಟನೆ

ಎಡರಂಗದಿಂದ ನಡೆದ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ನೂತನವಾಗಿ ಅಧಿಕಾರಕ್ಕೇರಿದ ಎಡರಂಗ ಸರಕಾರದ ಮದ್ಯ ನೀತಿಯನ್ನು ವಿರೋಧಿಸಿ ರಾಜ್ಯದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಪ್ರತಿಭಟನೆ ಭಾಗವಾಗಿ ಇಲ್ಲೂ ಪ್ರತಿಭಟನೆ ನಡೆಯಿತು.

ಕಾಸರಗೋಡು ಯುಡಿಎಫ್ ಮಂಡಲ ಸಮಿತಿಯ ನೇತೃತ್ವದಲ್ಲಿ ಕಾಸರಗೋಡು ಹೊಸ ಬಸ್ ನಿಲ್ದಾಣದ ಸಮೀಪದ ಸಹಿ ಮರದಡಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಚೆರ್ಕಳಂ ಅಬ್ದುಲ್ಲ ಮಾತನಾಡಿ, “ಯುಡಿಎಫ್ ಸರಕಾರ ನಿಷೇಧ ಹೇರಿದ ಮದ್ಯ ನೀತಿಗೆ ಇದೀಗ ಎಡರಂಗ ಸರಕಾರ ಸಾರ್ವಜನಿಕರಿಗೆ ಮುಕ್ತವಾಗಿಸಿದೆ. ಇದು ಸಾಮಾನ್ಯ ಜನತೆಯ ಮೇಲೆ ಭಾರೀ ಪರಿಣಾಮ ಬೀರಲಿದೆ. ಈ ನೀತಿಯಿಂದ ಸರಕಾರ ಹಿಂದಕ್ಕೆ ಸರಿಯುವ ತನಕ ಐಕ್ಯರಂಗ ಹೋರಾಟ ಮುಂದುವರಿಸುತ್ತದೆ” ಎಂದು ಹೇಳಿದರು.