ಲಾರಿಯಿಂದ ಟಯರುಗಳ ಕಳವು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-66ರ ನಿಟ್ಟೂರು ಗಣೇಶ್ ಪ್ರಸಾದ್ ಹೋಟೆಲ್ ಎದುರು ನಿಂತಿದ್ದ ಲಾರಿಯಿಂದ ಸುಮಾರು 4.78 ಲಕ್ಷ ರೂಪಾಯಿ ಮೌಲ್ಯದ ಎಂಆರ್‍ಎಫ್ ಕಂಪೆನಿ ಟಯರುಗಳನ್ನು ಕಳವುಗೈದ ಘಟನೆ ನಡೆದಿದೆ.

ಲಾರಿ ಚಾಲಕ ಬಸವರಾಜ್ ಕಂಟೇನರ್ ಲಾರಿಯಲ್ಲಿ ಗೋವಾದ ಉಸ್ಗಾಂನಲ್ಲಿರುವ ಎಮ್ ಆರ್ ಎಫ್ ಫ್ಯಾಕ್ಟರಿಯಿಂದ ಮಂಗಳೂರಿನ ಡಿಪೆÇೀಗೆ ಟಯರುಗಳನ್ನು ಸಾಗಿಸುತ್ತಿದ್ದು, ನಿಟ್ಟೂರಿನ ಗಣೇಶ್ ಹೋಟೆಲಿನಲ್ಲಿ ಊಟ ಮುಗಿಸಿಕೊಂಡು ಅಲ್ಲೇ ಲಾರಿ ನಿಲ್ಲಿಸಿ ಮಲಗಿದ್ದರು.

ಈ ಸಂದರ್ಭದಲ್ಲಿ ಕಳ್ಳರು ಕಂಟೈನರ್ ಡೋರಿನ ಬೀಗ ಮುರಿದು 4,78,856.22 ಮೌಲ್ಯದ ಟಯರುಗಳನ್ನು ಕಳವುಗೈದಿದ್ದಾರೆ ಎಂದು ದೂರಲಾಗಿದೆ.