ಇಬ್ಬರು ಯುವಕರಿಗೆ ಇರಿತ

ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ : ಹೊಸಂಗಡಿಯಲ್ಲಿ ಬೆಜ್ಜ ನಿವಾಸಿಗಳಾದ ನಾದಿರ್ (20) ಹಾಗು ರಹೀಸ್ (19)ಎಂಬ ಇಬ್ಬರು ಯುವಕರಿಗೆ ಇರಿದು ಗಾಯಗೊಳಿಸಲಾಗಿದೆ. ಇವರನ್ನು ಕುಂಬಳೆ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಬೆಜ್ಜ ಮಸೀದಿ ಪರಿಸರದಲ್ಲಿ ನಿಂತಿರುವಾಗ ಬೈಕಿನಲ್ಲಿ ಆಗಮಿಸಿದ ಮೂರು ಮಂದಿಯ ತಂಡ ಇರಿದು ಗಾಯಗೊಳಿಸಿ ಪರಾರಿಯಾಗಿರುವುದಾಗಿ ದೂರಲಾಗಿದೆ.
ಸೈಕಲ್ ಚೈನ್, ಕಬ್ಬಿಣದ ರಾಡ್ ಹಾಗು ಕತ್ತಿಯಿಂದ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಮೊದಲು ಸಂಭವಿಸಿದ ಘಟನೆಯೊಂದರ ಬಗ್ಗೆ ಪೆÇಲೀಸರಿಗೆ ದೂರು ನೀಡಿದ್ದನ್ನು ಪ್ರಶ್ನಿಸಿ ತಂಡ ಹಲ್ಲೆಗೈದಿರುವುದಾಗಿ ದೂರಲಾಗಿದೆ.