ನೋಟು ನಿಷೇಧ ಬೆಂಬಲಿಸಿದ ಇಬ್ಬರು ನೊಬೆಲ್ ಪುರಸ್ಕøತರು

ಮೊಹಮ್ಮದ್ ಯೂನೂಸ್, ಜೀನ್ ಟೈರೋಲ್

ನವದೆಹಲಿ : ನೋಟು ನಿಷೇಧ ವಿಷಯದಲ್ಲಿ ಕ್ರಮೇಣ ಮೋದಿ ಸರ್ಕಾರ ಭಾರೀ ಪ್ರತಿರೋಧ ಎದುರಿಸುತ್ತಿರುವ ಈ ದಿನಗಳಲ್ಲೇ ನೋಬೆಲ್ ಪುರಸ್ಕøತ ಆರ್ಥಿಕ ತಜ್ಞರಿಬ್ಬರು ಭಾರತ ಸರ್ಕಾರದ ಈ ಯೋಜನೆಗೆ ಮುಕ್ತ ಬೆಂಬಲ ಸೂಚಿಸಿದ್ದಾರೆ.

ಮೋದಿಯ ನಗದುರಹಿತ ಯೋಜನೆ ಅತ್ಯುತ್ತಮವಾಗಿದೆ ಎಂದು ಬಾಂಗ್ಲಾದೇಶದ ಗ್ರಾಮೀಣ ಬ್ಯಾಂಕ್ ಸಂಸ್ಥಾಪಕ ಮೊಹಮ್ಮದ್ ಯೂನೂಸ್ ಮತ್ತು ಫ್ರೆಂಚ್ ಆರ್ಥಿಕತಜ್ಞ ಜೀನ್ ಟೈರೋಲ್ ಅಭಿಪ್ರಾಯಪಟ್ಟಿದ್ದಾರೆ.

ನಗದುರಹಿತ ಆರ್ಥಿಕತೆ ದೇಶಕ್ಕೆ ವರಪ್ರಸಾದವಾಗಿದ್ದು, ಇದು ಕಪ್ಪುಹಣ ಮತ್ತು ಭ್ರಷ್ಟಾಚಾರವನ್ನು ಸದ್ದಿಲ್ಲದೆ ಕೊಲ್ಲುವ ಅಸ್ತ್ರವಾಗಿದೆ ಎಂದು ಇಬ್ಬರೂ ಮಾಧ್ಯಮಕ್ಕೆ ಪ್ರತ್ಯೇಕ ಹೇಳಿಕೆ ನೀಡಿದ್ದಾರೆ.

ಈ ಇಬ್ಬರು ಆರ್ಥಿಕತಜ್ಞರು ಈಗ ಭಾರತದಲ್ಲಿದ್ದಾರೆ. 2006ರಲ್ಲಿ ನೋಬೆಲ್ ಪುರಸ್ಕøತರಾಗಿದ್ದ ಯೂನೂಸ್ ವಿಶಾಖಪಟ್ಟಣಂನಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡಿದ್ದರೆ, 2014ರಲ್ಲಿ ಟೈರೋಲ್ ನೋಬೆಲ್ ಪುರಸ್ಕøತರಾಗಿದ್ದು, ಕೋಲ್ಕತ್ತದ ಪ್ರೆಸಿಡೆನ್ಸಿ ಯೂನಿವರ್ಸಿಟಿಯಲ್ಲಿ ಆಯೋಜಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿದ್ದಾರೆ.

ನಗದುರಹಿತ ಮಾದರಿಯ ಯಶಸ್ವಿಯು ಎಲ್ಲ ನಿಟ್ಟಿನಲ್ಲಿ ಪ್ರೋತ್ಸಾಹಕವಾಗಿರಬೇಕು ಎಂದ ಯೂನುಸ್, “ಮಹತ್ವದ ಮಾತೆಂದರೆ ಗ್ರಾಮೀಣ ಮತ್ತು ಅಸಂಘಟಿತ ವಲಯದಲ್ಲಿ ನೋಟು ನಿಷೇಧದ ಬಳಿಕ ನಗದುರಹಿತ ವ್ಯವಸ್ಥೆ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು” ಎಂದವರು ಸುದ್ದಿಗಾರರಲ್ಲಿ ತಿಳಿಸಿದರು.

“ನಗದುರಹಿತ ವ್ಯವಸ್ಥೆಯಲ್ಲಿ ಬಡಜನರು ಬವಣೆಗೆ ಸೂಕ್ತ ಪರಿಹಾರ ಸಿಗಬೇಕು. ಯಾಕೆಂದರೆ ಅವರು ನಗದನ್ನೇ ನಂಬಿಕೊಂಡಿದ್ದಾರೆ”ಂದು ಟೈರೋಲ್ ಸಲಹೆ ನೀಡಿದರು.

ಭ್ರಷ್ಟಾಚಾರ ತೊಡೆದು ಹಾಕಲು ಭಾರತ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರ ಮೆಚ್ಚುವಂತಹದ್ದು ಎಂದವರು ವಿವರಿಸಿದರು.