ಬಾವಿ ಮಣ್ಣು ಕುಸಿದು ಇಬ್ಬರು ಮೃತ ; ಇನ್ನೊಬ್ಬ ಆಘಾತಕ್ಕೆ ಬಲಿ

ಗದಗ : ದುರಸ್ತಿ ಮಾಡುತ್ತಿದ್ದ ವೇಳೆ ಬಾವಿಯೊಂದು ಆಕಸ್ಮಿಕವಾಗಿ ಕುಸಿದು ಇಬ್ಬರು ವ್ಯಕ್ತಿಗಳು ಅದರೊಳಗೆ ಸಮಾಧಿಯಾದ ಘಟನೆ ಇಲ್ಲಿನ ಗ್ರಾಮವೊಂದರಲ್ಲಿ ನಿನ್ನೆ ನಡೆದಿದೆ. ರೋಣ ತಾಲೂಕಿನ ಸವದಿ ಎಂಬಲ್ಲಿ ಶಂಕರಪ್ಪ ಮಲ್ಲಪ್ಪ ಬನದ (38) ಮತ್ತು ಬಸವರಾಜ ಸಂಗನಬಸಪ್ಪ ಬೆಲ್ಲದ ಎಂಬವರು ಕೆಟ್ಟು ಹೋಗಿದ್ದ ಬೋರುವೆಲ್ ದುರಸ್ತಿ ಮಾಡುತ್ತಿದ್ದ ವೇಳೆ ಮಣ್ಣು ಕುಸಿದು ಬಿದ್ದು ಈ ದುರಂತ ಸಂಭವಿಸಿದೆ. ಈ ದುರಂತ ಸನ್ನಿವೇಶ ಕಂಡ ಇನ್ನೊಬ್ಬರು ಆಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.