ರೆಡ್ ಕ್ರಾಸ್ ಸೊಸೈಟಿಯಿಂದ 2 ದಿನದ ತರಬೇತಿ ಶಿಬಿರ

ನಮ್ಮ ಪ್ರತಿನಿಧಿ ವರದಿ
ಕಾಸರಗೋಡು : ಜ್ಯೂನಿಯರ್ ರೆಡ್ ಕ್ರಾಸ್ ಕಾಸರಗೋಡು ನೇತೃತ್ವದಲ್ಲಿ ಎರಡು ದಿವಸದ ಜೀವ ರಕ್ಷಣೆ ತರೇತಿ ಶಿಬಿರ ಜರಗಿತು. ಚೆಮ್ನಾಡ್ ಹೈಯರ್ ಸೆಕಂಡರಿ ಶಾಲೆಯಲ್ಲಿ ಶಿಬಿರವನ್ನು ಆಯೋಜಿಸಲಾಗಿತ್ತು.
ಶಿಬಿರವನ್ನು ಕಾಸರಗೋಡು ಶಾಸಕ ಎನ್ ಎ ನೆಲ್ಲಿಕುನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಫ್ರಾನ್ಸ್ ಹಾಗು ಆಸ್ಟ್ರೇಲಿಯ ಮಧ್ಯೆ ಯುದ್ದ ಉಂಟಾದಾಗ ಅದರಲ್ಲಿ ಗಾಯಗೊಂಡ ಜವಾನರನ್ನು ನೋಡಿ 1862ರಲ್ಲಿ ಜೀನ್ ಹೆನ್ರಿ ಎಂಬಾತನ ತಲೆಯಲ್ಲಿ ಉದ್ಬವಿಸಿದ ಒಂದು ಸಂಘಟನೆ ಇದೀಗ ಜಗತ್ತಿನಾದ್ಯಂತ ರೆಡ್ ಕ್ರಾಸ್ ಸಂಸ್ಥೆಯಾಗಿ ಬೆಳೆದುಕೊಂಡಿದೆ ಎಂದರು.
ಸಹ ಜೀವಿಗಳೊಂದಿಗೆ ಸ್ನೇಹವನ್ನು ಬೆಳೆಸುವುದು ಯಾವುದೇ ದುರಂತ ಸಂಭವಿಸಿದರೂ ಅದನ್ನು ಎದುರಿಸುವಂಥ ಮನಸ್ಸು ಈ ಸಂಘಟನೆಯಲ್ಲಿ ಇರುತ್ತದೆ. ಇದೀಗ ಎಲ್ಲಾ ಕೆಲಸಗಳನ್ನು ಬದಿಗಿಟ್ಟು ಎರಡು ದಿವಸದ ಶಿಬಿರಕ್ಕೆ ಹಾಜರಾದ ವಿದ್ಯಾರ್ಥಿಗಳು ಎಲ್ಲಾ ತ್ಯಾಗಕ್ಕೂ ಸಿದ್ದರಾಗಿದ್ದಾರೆಂಬುದು ಅರ್ಥವೆಂದು ಹೇಳಿ ಶಿಬಿರದಲ್ಲಿ ಭಾಗಿಯಾದ ವಿದ್ಯಾರ್ಥಿಗಳನ್ನು ಶಾಸಕರು ಅಭಿನಂದಿಸಿದರು.
ಎ ಬಿ ಮುನೀರ್ ಅಧ್ಯಕ್ಷತೆ ವಹಿಸಿದರು. ಮಾಜಿ ಸಚಿವ ಸಿ ಟಿ ಆಹ್ಮದಾಲಿ ಮುಖ್ಯ ಅತಿಥಿಯಾಗಿದ್ದರು. ಶಿಬಿರದಲ್ಲಿ ರೆಡ್ ಕ್ರಾಸ್ ಚರಿತ್ರೆ ಎಂಬ ವಿಷಯದಲ್ಲಿ ಹಾಗು ರಸ್ತೆ ಸುರಕ್ಷೆ ಹಾಗು ಟ್ರಾಫಿಕ್ ನಿಯಮಗಳ ಬಗ್ಗೆ ತರಗತಿಗಳು ನಡೆದವು. ಇಂದು ಶಿಬಿರ ಸಮಾಪ್ತಿಗೊಳ್ಳಲಿದೆ.