ಅಕ್ರಮ ಗೋಮಾಂಸ ಸಾಗಾಟದ ಇಬ್ಬರ ಸೆರೆ

ಬೆಳ್ತಂಗಡಿ : ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಇಬ್ಬರನ್ನು ಬೆಳ್ತಂಗಡಿ ಪೊಲೀಸರು ಮಾಂಸ ಹಾಗೂ ವಾಹನ ಸಹಿತ ವಶಕ್ಕೆ ತೆಗೆದುಕೊಂಡಿದ್ದಾರೆ.

ತಾಲೂಕಿನ ಕೊಲ್ಲಿ ಎಂಬಲ್ಲಿಂದ ನಾವೂರು ಕಡೆಗೆ ಮಾಂಸ ಸಾಗಾಟ ಮಾಡುತ್ತಿದ್ದಾಗ ಇಂದಬೆಟ್ಟು ಎಂಬಲ್ಲಿ ರಿಕ್ಷಾದಲ್ಲಿ ಸುಮಾರು 50 ಕೇಜಿ ಗೋಮಾಂಸವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಗೋಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಂದಬೆಟ್ಟು ನಿವಾಸಿಗಳಾದ ಶಬೀರ್ (26) ಹಾಗೂ ಶೇಕಬ್ಬ (65) ಎಂಬವರನ್ನು ಬಂಧಿಸಲಾಗಿದ್ದು, ರಿಕ್ಷಾ ಹಾಗೂ ಮಾಂಸವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY