ಶಿರಾಡಿ ಘಾಟಿ ಪ್ರದೇಶದಲ್ಲಿ ಬೃಹತ್ ಸುರಂಗ ಮಾರ್ಗ ನಿರ್ಮಾಣ ಖಾತ್ರಿ

ಹಾಸನ : ಮಂಗಳೂರು ಮತ್ತು ಬೆಂಗಳೂರು ಮಧ್ಯೆ ಪ್ರಯಾಣ ಅಂತರ ಕಡಿಮೆಗೊಳಿಸುವ ಹಾಗೂ ಸಕಲೇಶಪುರ ಅರಣ್ಯ ಪ್ರದೇಶದ ಮೂಲಕ ಹಾದು ಹೋಗಲಿರುವ ಶಿರಾಡಿ ಘಾಟಿಯ ಸುರಂಗ ಮಾರ್ಗ ನಿರ್ಮಾಣಕ್ಕೆ ಈಗ ಭೂಗರ್ಭ ಪರೀಕ್ಷೆಗಳು ನಡೆಯುತ್ತಿವೆ.

ಇಲ್ಲಿ 23.5 ಕಿಮೀ ಉದ್ದದ ಓವರಬ್ರಿಡ್ಜಿನೊಂದಿಗೆ ಸುರಂಗ ಯೋಜನೆ ಪ್ರಸ್ತಾವಿಸಲಾಗಿದ್ದು, ಸದ್ಯ ಯೋಜನೆ ಭಾಗದ ಮಣ್ಣು ಮತ್ತು ಬಂಡೆಗಳ ಪರೀಕ್ಷೆ ನಡೆಯುತ್ತಿದೆ. ಯೋಜನೆಗೆ 10,000 ಕೋಟಿ ರೂ ಖರ್ಚಾಗುವ ಸಾಧ್ಯತೆ ಇದೆ.

ಆಸ್ಟ್ರೇಲಿಯಾದ ಜಿಯೋಕನ್ಸಲ್ಟ್ ಇಂಡಿಯಾ ಪ್ರೈ ಲಿಮಿಟೆಡ್ ನವಂಬರಿನಿಂದ ಯೋಜನಾ ಪ್ರದೇಶದಲ್ಲಿ ಭೂಗರ್ಭ ಪರೀಕ್ಷೆ ಆರಂಭಿಸಿದೆ. ಈ ಕಾರ್ಯ ಜನವರಿಯಲ್ಲಿ ಮುಗಿಯುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಪ್ರಾಜೆಕ್ಟ್ ಪ್ರದೇಶದಲ್ಲಿ ಕಠಿಣವಾದ ಬಂಡೆಗಳು ಇದ್ದು, ಇದು ಸುರಂಗ ಮಾರ್ಗ ಸ್ಥಿರತೆ ಕಾಪಾಡಲಿದೆ ಎಂದು ಕಂಪೆನಿಯ ಭೂಗರ್ಭಶಾಸ್ತ್ರರು ಹೇಳಿದ್ದಾರೆ.