ಪೊಲೀ ಸ್ ಸಿಬ್ಬಂದಿಗೆ ತುಳು ತರಬೇತಿ ಕಾರ್ಯಾಗಾರ

ಸಾಂದರ್ಭಿಕ ಚಿತ್ರ

 

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರ ಪೊಲೀ ಸ್ ಕಮಿಷನರೇಟ್ ಹೊರ ಜಿಲ್ಲೆಗಳಿಂದ ನೇಮಕವಾದ ಪೊಲೀ ಸ್ ಸಿಬ್ಬಂದಿಗೆ 10 ದಿವಸಗಳ ಕಾಲ ತುಳು ಭಾಷೆಯ ತರಬೇತಿ ಕಾರ್ಯಾಗಾರ ನಡೆಯಿತು. ಸುಮಾರು 42 ಶಿಬಿರಾರ್ಥಿಗಳು ಇದರಲ್ಲಿ ಪಾಲ್ಗೊಂಡಿದ್ದರು.

ನಗರ ಪೊಲೀಸ್ ಆಯುಕ್ತ ಚಂದ್ರಸೇಖರ್ ಅಧ್ಯಕ್ಷತೆ ವಹಿಸಿದ್ದರು. ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ, ಮಂಗಳೂರು ವಿ ವಿ ಪ್ರಾಂಶುಪಾಲ ಉದಯ ಎಂ ಎ, ಪೊಲೀ ಸ್ ಡಿಸಿಪಿಗಳಾದ ಶಾಂತರಾಜು ಹಾಗೂ ಸಂಜೀವ ಪಾಟೀಲ ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕ ವಿಶ್ವನಾಥ ಬದಿಕಾನ, ಗಿರಿಯಪ್ಪ ಆಳ್ವ ಮೊದಲಾದವರು ಉಪಸ್ಥಿತರಿದ್ದರು.