ಆಟೋರಿಕ್ಷಾ ಡಿಕ್ಕಿ : ಲಾರಿ ಚಾಲಕ ಗಂಭೀರ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ರಸ್ತೆ ಬದಿ ಲಾರಿ ನಿಲ್ಲಿಸಿಕೊಂಡು ಲಾರಿ ಚಾಲಕ ಮತ್ತು ಕ್ಲೀನರ್ ಲಾರಿ ಹಿಂಬದಿ ಕಟ್ಟಿದ್ದ ಸಡಿಲವಾದ ಹಗ್ಗವನ್ನು ಸರಿಪಡಿಸುತ್ತಿದ್ದ ವೇಳೆ ರಿಕ್ಷಾವೊಂದು ಡಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಶನಿವಾರ ಸಂಜೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-66ರ ಸಂತೆಕಟ್ಟೆ ಸಮೀಪದ ಆರ್ಶೀರ್ವಾದ್ ಟಾಕೀಸ್ ಬಳಿ ಸಂಭವಿಸಿದೆ. ಪರಶುರಾಮ ಎಂಬವರು ಗಂಭೀರ ಗಾಯಗೊಂಡ ಲಾರಿ ಚಾಲಕ. ಸಂತೆಕಟ್ಟೆ ಸಮೀಪದ ಆಶೀರ್ವಾದ್ ಟಾಕೀಸ್ ಬಳಿಯ ತೋನ್ಸೆ ನಾಗಪ್ಪ ವಾಣಿಜ್ಯ ಸಂಕೀರ್ಣ ಎದುರು ಘಟನೆ ಸಂಭವಿಸಿದೆ.ಲಾರಿ ನಿಲ್ಲಿಸಿ ಚಾಲಕ ಪರುಶುರಾಮ ಹಾಗೂ ಕ್ಲೀನರ್ ವಿಜಯಪುರ ಜಿಲ್ಲೆ ಸಿಂಧಗಿ ತಾಲೂಕಿನ ಕಾಳಪ್ಪ ಎಂಬವರು ಹಗ್ಗ ಸರಿ ಪಡಿಸುತ್ತಿದ್ದಾಗ ಉಡುಪಿ ನಗರದ ಸಿಟಿಬಸ್ ನಿಲ್ದಾಣ ಬಳಿಯ ಐರೋಡಿಕರ್ಸ್ ಸರ್ಕಲ್ ಎದುರಿನ ರಿಕ್ಷಾ ನಿಲ್ದಾಣದ ರಿಕ್ಷಾ ಚಾಲಕ ಆರೋಪಿ ತೌಫಿಕ್(28) ಎಂಬಾತನು ತನ್ನ ರಿಕ್ಷಾದಲ್ಲಿ ಇನ್ನೊಬ್ಬನನ್ನು ಕುಳ್ಳಿರಿಸಿಕೊಂಡು, ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದ್ದ. ಆರೋಪಿ ರಿಕ್ಷಾ ಚಾಲಕ ತೌಫಿಕ್ ಮತ್ತು ರಿಕ್ಷಾದಲ್ಲಿದ್ದ ಇನ್ನೊಬ್ಬನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ರಿಕ್ಷಾ ಚಾಲಕನ ವಿರುದ್ಧ ಸಂಚಾರಿ ಠಾಣೆಯಲ್ಲಿ ಕೇಸು ದಾಖಲಾಗಿದೆ.