ರಾಜ್ಯದ ಇಬ್ಬರು ಬಿಜೆಪಿ ಸಂಸದರಿಂದ ನಿಂದಕರ ತಂಡ : ರಮ್ಯಾ ಆರೋಪ

ಬೆಂಗಳೂರು : ತಮ್ಮ ವಿರೋಧಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಲೆಂದೇ ಇಬ್ಬರು ಬಿಜೆಪಿ ಸಂಸದರು  ಜನರನ್ನು ನೇಮಕ ಮಾಡಿದ್ದಾರೆ ಎಂದು ನಟಿ ಹಾಗೂ ಕಾಂಗ್ರೆಸ್ ನಾಯಕಿ ರಮ್ಯಾ ಆರೋಪಿಸಿದ್ದಾರೆ.

“ಮೈಸೂರು-ಮಂಡ್ಯದ ಬಿಜೆಪಿ ಸಂಸದ ಹಾಗೂ ಬೆಂಗಳೂರಿನ ರಾಜ್ಯಸಭಾ ಸದಸ್ಯರೊಬ್ಬರು  ಕೆಲವು ಏಜನ್ಸಿಗಳನ್ನು ಇದಕ್ಕಾಗಿ ಗೊತ್ತು ಮಾಡಿದ್ದಾರೆ. ಟ್ರೋಲ್ ಸೇನೆಯೊಂದನ್ನು ನಿರ್ಮಿಶಲು ಅವರು ವಿವಿಧ ಹ್ಯಾಂಡಲುಗಳನ್ನೂ ರಚಿಸಿಕೊಂಡಿದ್ದಾರೆ” ಎಂದು ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ಹಾಗೂ ಡಿಜಿಟಲ್ ಕಮ್ಯುನಿಕೇಶನ್ ತಂಡವನ್ನು ಮುನ್ನಡೆಸುತ್ತಿರುವ gಮ್ಯಾ ದೂರಿದ್ದಾರೆ.