ತ್ರಿವಳಿ ತಲಾಖ್ : ಸಾಂವಿಧಾನಿಕ ಪೀಠ ರಚಿಸುವ ಸುಳಿವು ನೀಡಿದ ಸುಪ್ರೀಂ

 ನವದೆಹಲಿ : ತ್ರಿವಳಿ ತಲಾಖ್ ಪದ್ಧತಿಯ ಸಿಂಧುತ್ವವನ್ನು ಪ್ರಶ್ನಿಸಿ ದಾಖಲಾಗಿರುವ ಹಲವಾರು ಅಪೀಲುಗಳನ್ನು ಪರಾಮರ್ಶಿಸಲು ಸುಪ್ರೀಂ ಕೋರ್ಟ್ ಗುರುವಾರದಂದು ಸಾಂವಿಧಾನಿಕ ಪೀಠವೊಂದನ್ನು ರಚಿಸುವ ಪ್ರಸ್ತಾಪವಿರುವುದಾಗಿ ಹೇಳಿದೆ.

“ಅಪೀಲುಗಳಲ್ಲಿ ಎತ್ತಲಾಗಿರುವ ಎಲ್ಲಾ ವಿಚಾರಗಳೂ ಮಹತ್ವದ್ದಾಗಿದ್ದು ಅವುಗಳಲ್ಲಿ ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ” ಎಂದು ಮುಖ್ಯ ನ್ಯಾಯಮೂರ್ತಿ ಜೆ ಎಸ್ ಖೇಹರ್ ಅವರ ನೇತೃತ್ವದ ತ್ರಿಸದಸ್ಯರ ಪೀಠ ಹೇಳಿತಲ್ಲದೆ ಬೇಸಿಗೆ ರಜಾ ಕಾಲದಲ್ಲಿ ಸಾಂವಿಧಾನಿಕ ಪೀಠ ರಚನೆಯಾಗಬಹುದು ಎಂಬ ಬಗ್ಗೆ ಸುಳಿವು ನೀಡಿದೆ.

ತಮ್ಮ ಬೇಡಿಕೆಯನ್ನು ಸಮರ್ಥಿಸುವ ಅಂಶಗಳನ್ನೊಳಗೊಂಡ ಸಂಕ್ಷಿಪ್ತ ವರದಿಯೊಂದನ್ನು  ಮಾರ್ಚ್ 30ರೊಳಗೆ  ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ಜಸ್ಟಿಸ್ ಎನ್ ವಿ ರಮಣ ಹಾಗೂ ಡಿ ವೈ ಚಂದ್ರಚೂಡ್ ಅವರನ್ನೊಳಗೊಂಡ ಪೀಠವು ವಿವಿಧ ಅಪೀಲುದಾರರನ್ನು ಪ್ರತಿನಿಧಿಸುತ್ತಿರುವ ವಕೀಲರಿಗೆ ತಿಳಿಸಿದೆ.