ತ್ರಿಶತಕ ವೀರ ಕ್ರಿಕೆಟಿಗ ನಾಯರ್ ಸಾಧನೆ

ಎಲ್ಲ ಬಗೆಯ ಕ್ರಿಕೆಟಿನಲ್ಲೂ ಭಾರತೀಯ ಅತ್ಯುತ್ತಮ ಪ್ರದರ್ಶನ ನೀಡುತ್ತ ವಿಶ್ವದಾಖಲೆ ಬರೆಯುತ್ತ, ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಅಗ್ರಸ್ಥಾನ ಪಡೆಯುತ್ತಿರುವುದು ಖುಷಿಯ ವಿಚಾರ. ಕ್ರಿಕೆಟಿಗಷ್ಟೇ ಪ್ರೋತ್ಸಾಹ ನೀಡಲಾಗುತ್ತಿದೆ ಎಂಬ ಆಕ್ಷೇಪಣೆ ನಡುವೆಯೂ ಇಂಥ ಸಾಧನೆಗಳು ಎಲ್ಲರ ಮನದಲ್ಲೂ ಸ್ಫೂರ್ತಿ ಹುಟ್ಟಿಸುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.

ಇಂಗ್ಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಪಂದ್ಯದಲ್ಲಿ ಕರ್ನಾಟಕದ ಕರುಣ್ ನಾಯರ್ ಸಿಡಿಸಿದ ತ್ರಿಶತಕ ಕೂಡ ಸ್ಫೂರ್ತಿಯುತ ಸಾಧನೆಯೇ ಸರಿ. ಶಿಸ್ತು, ಸೃಜನಶೀಲತೆ ಮತ್ತು ತಾಳ್ಮೆಯನ್ನು ಹದವಾಗಿ ಬೆರೆಸಿದ ಆಟವಾಡುವ ಮೂಲಕ ತಮ್ಮ ಚೊಚ್ಚಲ ತ್ರಿಶತಕವನ್ನು ಪರಿವರ್ತಿಸಿದ ಕರುಣಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಂದ ಭರಪೂರ ಹಾರೈಕೆ ಸಿಕ್ಕಿದೆ.  ಅವರಂಥ ಯುವಜನರ ಕ್ರೀಡಾ ಸಾಧನೆ ಹೀಗೇ ಮುಂದುವರಿಯಲಿ.

  • ಚೇತನ್ ಸುವರ್ಣ, ಕೋಟೇಶ್ವರ