ಬಲವಂತ ಸ್ಕೂಟರ್ ವಶಪಡಿಸಿದ ತಂಡದ ಮೂರು ಮಂದಿ ಬಂಧನ

ಸಾಂದರ್ಭಿಕ ಚಿತ್ರ

ಕಾಸರಗೋಡು : ಪ್ರಯಾಣಿಕರನ್ನು ತಡೆದು ನಿಲ್ಲಿಸಿ ಹಣ ಹಾಗೂ ಮೊಬೈಲ್, ಸ್ಕೂಟರ್ ಅಪಹರಿಸಿದ ದೂರಿನಂತೆ ಮೂರು ಮಂದಿಯನ್ನು ಆದೂರು ಪೆÇಲೀಸರು ಬಂಧಿಸಿದ್ದಾರೆ. ಮಂಞಪಾರ ಬಳಿಯ ನಿವಾಸಿ ಸಾಬಿತ್ (25), ಮೈಂದನ್ ಪಾರದ ಅಬ್ದುಲ್ ಅಸೀಸ್, ಮುಳ್ಳೇರಿಯದ ಜಾಫರ್ (20) ಎಂಬವರನ್ನು ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿ ನೌಷಾದಗಾಗಿ ತನಿಖೆ ತೀವ್ರಗೊಳಿಸಿದ್ದಾರೆ.

ಅಕ್ಟೋಬರ್ 6ರಂದು ರಾತ್ರಿ ಸ್ಕೂಟರಿಲ್ಲಿ ಸಂಚರಿಸುತ್ತಿದ್ದಾಗ ಬೆಳ್ಳೂರು ಕುಳದಪಾರೆಯಲ್ಲಿ ವಾಸ ಮಾಡುತ್ತಿದ್ದ ಇಡುಕ್ಕಿ ನಿವಾಸಿಗಳಾದ ಸೈಜುಜೋಸ್, ಸಜಿನ್ ಎಂಬವರನ್ನು ತಡೆದು ನಿಲ್ಲಿಸಿ ಹಲ್ಲೆಗೈದ ಬಳಿಕ ಅವರಲ್ಲಿದ್ದ 1500 ರೂ, ಮೊಬೈಲ್, ಸ್ಕೂಟರ್ ಅಪಹರಿಸಿ ಪರಾರಿಯಾಗಿದ್ದರು. ಇವರು ಸುಳ್ಯದಲ್ಲಿ ತಲೆಮರೆಸಿಕೊಂಡು ವಾಸವಿದ್ದ ಮನೆಯನ್ನು ಪೆÇಲೀಸರು ಪತ್ತೆಹಚ್ಚಿದಾಗ ಅಲ್ಲಿಂದ ಊರಿಗೆ ಹಿಂತಿರುಗಿದ್ದರು. ಮುಳ್ಳೇರಿಯ ಪೇಟೆಯಲ್ಲಿ ಅನುಮಾನ ಬಾರದಂತೆ ತಿರುಗಾಡುತ್ತಿದ್ದಾಗ ಸೋಮವಾರ ಇವರನ್ನು ಬಂಧಿಸಲಾಗಿದೆ. ಇದರಲ್ಲಿ ಜಾಫರ್ ಎನ್ನುವಾತ ಸ್ಕೂಟರ್ ಅಡಗಿಸಿಡಲು ನೆರವಾಗಿದ್ದ ಎಂದು ಪೆÇಲೀಸರು ತಿಳಿಸಿದ್ದಾರೆ.