ಮನೆಗೆ ನುಗ್ಗಿ ಹಲ್ಲೆ , ಮೂವರು ಆಸ್ಪತ್ರೆಗೆ

ಸಾಂದರ್ಭಿಕ ಚಿತ್ರ

ಸಿಟಿ ಬ್ಯೂರೋ ವರದಿ

ಮಂಗಳೂರು : ತಲಪಾಡಿ ಕಿನ್ಯಾ ಬೆಳರಿಂಗೆಯಲ್ಲಿ  ಮನೆಯೊಂದ ನುಗ್ಗಿದ ತಂಡ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿದ ಘಟನೆ ನಿನ್ನೆ ನಡೆದಿದ್ದು, ಗಾಯಾಳುಗಳು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪುಷ್ಪಾವತಿ (53), ಪತಿ ಜನಾರ್ದನ್ (60) ಮತ್ತು ಪುತ್ರ ಅಜಿತ್ (23) ಹಲ್ಲೆಗೊಳಗಾದವರು. ಈ ಕುಟುಂಬ ತಮಗೆ ಸೇರಿದ 25 ಸೆಂಟ್ಸ್ ಜಾಗದಲ್ಲಿ ವಿವಿಧ ರೀತಿಯ ಬೆಳೆಗಳನ್ನು ಬೆಳೆಸುತ್ತಿದ್ದು, ಪಕ್ಕದ ಮನೆಯ ಹಮೀದ್ ಎಂಬವರು ಸಾಕುತ್ತಿದ್ದ ಆಡುಗಳು ಇವರ ಜಾಗಕ್ಕೆ ಬಂದು ಕೃಷಿ ನಾಶ ಮಾಡುತ್ತಿದೆ ಎಂದು ಪುಷ್ಪಾವತಿ ಆಡುಗಳನ್ನು ಓಡಿಸಿದ್ದರು. ಇದು ಜಗಳಕ್ಕೆ ಕಾರಣವಾಗಿತ್ತು. ನಂತರ ಹಮೀದ್ ಪುತ್ರ ಫತಾಕ್ ಎಂಬಾತ ಇತರ ಹಲವರನ್ನು ಕರೆದುಕೊಂಡು ಬಂದು ಮನೆÀಗೆ ನುಗ್ಗಿದ್ದಾನೆ ಎಂದು ದೂರಲಾಗಿದೆ.

ಮನೆಯಲ್ಲಿದ್ದ ಅಜಿತಗೆ ರಾಡಿನಿಂದ ಹಲ್ಲೆ ನಡೆಸಿದ್ದು, ತಡೆಯಲು ಬಂದ ತಂದೆ-ತಾಯಿಗೂ ಸೇರಿ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎಂದು ಉಳ್ಳಾಲ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ದಾಖಲಿಸಲಾಗಿದೆ.