ಕೇರಳದ ಶಿಕ್ಷಣ ರಂಗ ಸಮಗ್ರ ಅಭಿವೃದ್ಧಿ : ರಾಜಗೋಪಾಲ್

ಹೊಸಂಗಡಿಯಲ್ಲಿ ನಡೆದ ಮೆರವಣಿಗೆ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಕೇರಳದ ಶಿಕ್ಷಣ ರಂಗದಲ್ಲಿ ಸಮಗ್ರ ಅಭಿವೃದ್ಧಿಯ ಶಕೆ ಆರಂಭವಾಗಿದೆ ಎಂದು ತೃಕ್ಕರಿಪುರ ಶಾಸಕ ಎಂ ರಾಜಗೋಪಾಲ್ ಅಭಿಪ್ರಾಯಪಟ್ಟರು.

ಕೇರಳ ಸ್ಕೂಲ್ ಟೀಚರ್ಸ್ ಅಸೋಸಿಯೇಶನ್ 26ನೇ ವಾರ್ಷಿಕ ಜಿಲ್ಲಾ ಸಮ್ಮೇಳನದ ಅಂಗವಾಗಿ ಹೊಸಂಗಡಿಯಲ್ಲಿ ಜರುಗಿದ ಬಹಿರಂಗ ಅಧಿವೇಶನ ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ಐಕ್ಯರಂಗ ಸರಕಾರ ಶಾಲೆಗಳಿಗೆ ಯಾವುದೇ ಮಾನದಂಡ ಇಲ್ಲದೆ ಬೇಕಾಬಿಟ್ಟಿ ಅಂಗೀಕಾರ ನೀಡುತ್ತಾ ಅನನುದಾನಿತ ಶಾಲೆಗಳ ವ್ಯಾಪಾರೀಕರಣಕ್ಕೆ, ಸುಲಿಗೆ ಕೋರತನಕ್ಕೆ ಪೆÇ್ರೀತ್ಸಾಹ ನೀಡಿತ್ತು. ಪಠ್ಯ ಪುಸ್ತಕಗಳನ್ನು ಸಕಾಲದಲ್ಲಿ ಪೂರೈಸದೆ, ಅಧ್ಯಾಪಕ ನೇಮಕಾತಿ ನಡೆಸದೆ, ವೇತನ ನೀಡದೆ ಭ್ರಷ್ಟಾಚಾರದಲ್ಲಿ ಮುಳುಗಿ ಮಿಂದು ಕೇರಳವನ್ನು ಅಧಃಪತನಕ್ಕಿಳಿಸಿ ಹೀನಾಯವಾಗಿ ಪರಾಭವಗೊಂಡಿತು. ಹಾಲಿ ಸರಕಾರ ಶಿಕ್ಷಣ ವ್ಯವಸ್ಥೆಯ ಅಮೂಲಾಗ್ರ ಬದಲಾವಣೆಗೆ ನಾಂದಿ ಹಾಡಿತು. ಬಜೆಟ್ಟಿನಲ್ಲಿ 7000 ಕೋಟಿ ರೂ ಮೀಸಲಿರಿಸಲು ತೀರ್ಮಾನಿಸಿದೆ. ಕಳೆದ ಸರಕಾರ ಮುಚ್ಚಿದ ಶಾಲೆಗಳನ್ನು ತೆರೆಯಲು ಕ್ರಮ ಕೈಗೊಂಡಿದೆ. ಅಧ್ಯಾಪಕರ ಸಂರಕ್ಷಣೆ ಖಾತರಿಗೊಳಿಸಿತು. ಶಾಲೆಗಳಲ್ಲಿ ಸ್ಮಾರ್ಟ್ ತರಗತಿಗಳ ನಿರ್ಮಾಣಕ್ಕೆ ಮುಂದಾಗಿದೆ. ಆದರೆ ಕೇಂದ್ರ ಸರಕಾರ ಜನವಿರೋಧಿ ನೀತಿ ತೀವ್ರಗೊಳಿಸುತ್ತಿದೆ. ಶಿಕ್ಷಣದ ಕೇಸರೀಕರಣ ವರ್ಧಿಸುತ್ತಿದೆ ಎಂದು ಆರೋಪಿಸಿದರು.

ಈ ಸಂದರ್ಭ ಹೊಸಂಗಡಿಯಲ್ಲಿ ಮೆರವಣಿಗೆ ಕೂಡಾ ನಡೆಯಿತು. ಹಲವಾರು ಮಂದಿ ಪಾಲ್ಗೊಂಡರು.