ನಾಪೋಕ್ಲುವಿನಲ್ಲಿ ಲಘು ಭೂಕಂಪ

ನಮ್ಮ ಪ್ರತಿನಿಧಿ ವರದಿ

ಮಡಿಕೇರಿ : ನಾಪೋಕ್ಲು ಸುತ್ತಮುತ್ತಲ ಹಲವು ಗ್ರಾಮಗಳಲ್ಲಿ ಮಂಗಳವಾರ ಬೆಳಿಗ್ಗೆ ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ.

ನಾಪೋಕ್ಲು, ಬೆಟ್ಟಗೇರಿ, ಚೆರಿಯ ಪರಂಬು, ಕಲ್ಲುಮೊಟ್ಟೆ, ಕುತ್ತಮೊಟ್ಟೆ, ಕೊಳಕೇರಿ, ಬೆತ್ತು ಮತ್ತು ಪೆರೂರುವಿನಲ್ಲಿ ಸುಮಾರು 7.35ರಿಂದ 7.45ರ ಮಧ್ಯೆ ಎರಡು ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಮಿ ನಡುಗಿದಂತೆ ಆಗಿದ್ದು, ಬೆಚ್ಚಿಬಿದ್ದ ಜನತೆ ಮನೆಯಿಂದ ಹೊರಗೋಡಿ ಬಂದಿದ್ದಾರೆ.

“ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದಂತೆ ಆಗಿದೆ. ನಾನೆಲ್ಲೋ ಆಕಾಶದಲ್ಲಿ ಹೆಲಿಕಾಫ್ಟರಿನಲ್ಲಿ ಮೋಡಬಿತ್ತನೆ ಕಾರ್ಯ ನಡೆಯುತ್ತಿದೆಯೇನೋ ಅಂದುಕೊಂಡೆ” ಎಂದು ನೆಲ್ಲೆಜೆ ಗ್ರಾಮದ ಅಪ್ಪಚ್ಚು ಎಂಬವರು ಹೇಳಿದರು.