ಮಳೆ, ಗಾಳಿಗೆ ಉರುಳಿದ ಮರ : ಟಿಸಿಗೆ ಹಾನಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಶುಕ್ರವಾರ ನಸುಕಿನ ಜಾವ ಸುರಿದ ಭಾರೀ ಮಳೆಗೆ ಮತ್ತು ಗಾಳಿಗೆ ಬೃಹತ್ ಮರವೊಂದು ಟ್ರಾನ್ಸಫಾರ್ಮರ್ ಶೆಡ್ ಮೇಲೆ ಉರುಳಿ ಬಿದ್ದು ಅಪಾರ ಹಾನಿ ಸಂಭವಿಸಿದೆ.

ನಗರದ ಬಿಜೈ ಮ್ಯೂಸಿಯಂ ಬಳಿ ಇರುವ ಶೆಡ್ ಮೇಲೆ ಮುಂಜಾನೆ 3 ಗಂಟೆಯ ಸುಮಾರಿಗೆ ಈ ಮರ ಬಿದ್ದಿದ್ದು, 3 ವಿದ್ಯುತ್ ಕಂಬಗಳಿಗೂ ಇದರಿಂದ ಹಾನಿ ಉಂಟಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಪಾಲಿಕೆ ಸದಸ್ಯ ಲ್ಯಾಸಲಾಟ್ ಪಿಂಟೋ ಅವರು ಆಗಮಿಸಿ ಮರಗಳನ್ನು ತೆರವುಗೊಳಿಸುವ ಕೆಲಸ ನಡೆಸಿದರು.