ಅಶ್ವತ್ಥ ಮರ ಬಿದ್ದು ಕಾರು ಜಖಂ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಕೊಟ್ಟಾರ ಇನ್ಫೋಸಿಸ್ ಕಚೇರಿ ಮುಂಭಾಗದಲ್ಲಿದ್ದ ಬೃಹತ್ ಅಶ್ವತ್ಥ ಮರವೊಂದು ಉರುಳಿ ಬಿದ್ದು ಕಾರು ಜಖಂಗೊಂಡ ಘಟನೆ ನಡೆದಿದೆ.

ಈ ಸಂದರ್ಭ ಸಂಚರಿಸುತ್ತಿದ್ದ ಕಾರು ಅದರಡಿಯಲ್ಲಿ ಸಿಲುಕಿಕೊಂಡು ಕಾರಿಗೆ ಸಣ್ಣಪುಟ್ಟ ಹಾನಿಯಾಗಿದೆ. ಮರವನ್ನು ಪಾಲಿಕೆ ಸಿಬ್ಬಂದಿಗಳು ತೆರವುಗೊಳಿಸಿದರು.