ಮರದ ರೆಂಬೆ ಮುರಿದು ಎರಡು ಕಾರು ಜಖಂ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕಾಸರಗೋಡು ತಾಲೂಕು ಕಚೇರಿ ಎದುರು ಮರದ ದೊಡ್ದ ರೆಂಬೆಯೊಂದು ಮುರಿದು ಬಿದ್ದು ಅದರ ಅಡಿ ನಿಲ್ಲಿಸಲಾಗಿದ್ದ ಎರಡು ಕಾರುಗಳು ಸಂಪೂರ್ಣ ಹಾನಿಗೀಡಾದ ಘಟನೆ ನಡೆದಿದೆ.

ಚೆಮ್ನಾಡು ಕೋಲಾಂತೊಟ್ಟಿ ನಿವಾಸಿ ಇಸಾಕ್ ಹಾಗೂ ಇನ್ನೊಂದು ಹೊಸ ಹೋಂಡಾ ಸಿಟಿ ಕಾರು ಹಾನಿಗೀಡಾಗಿವೆ. ಈ ಸಂದರ್ಭ ಕಾರಿನೊಳಗೆ ಯಾರು ಇಲ್ಲದ ಕಾರಣ ಸಂಭಾವ್ಯ ದುರಂತ ತಪ್ಪಿದೆ. ಬಳಿಕ ಸ್ಥಳೀಯರು ನೀಡಿದ ಮಾಹಿತಿಯಂತೆ ಕಾಸರಗೋಡು ಅಗ್ನಿಶಾಮಕದಳ ಸಿಬ್ಬಂದಿ ಆಗಮಿಸಿ ರೆಂಬೆಯನ್ನು ಕಡಿದು ಬದಿಗೆ ಸರಿಸಿದರು.