ಕುಂಜತ್ತೂರು ಹೈಯರ್ ಶಾಲೆಯಲ್ಲಿ ಹಾಯ್ ಕುಟ್ಟಿಕೂಟಂಗೆ ಚಾಲನೆ

ಮಂಜೇಶ್ವರ : “ಎಲ್ಲಾ ವಿದ್ಯಾರ್ಥಿಗಳಿಗೂ ತಂತ್ರಜ್ಞಾನದಲ್ಲಿ ಸಂಪೂರ್ಣ ತರಬೇತಿ ಕೋಡಬೇಕೆಂಬ ಉದ್ದೇಶದಿಂದ ರಾಜ್ಯದ ಎಲ್ಲಾ ಸರಕಾರಿ ಶಾಲೆಗಳಲ್ಲೂ ಆರಂಭಗೊಂಡ ಕುಟ್ಟಿಕೂಟಂನ ಮೊದಲ ಹಂತದ 8 ಹಾಗೂ 9ನೇ ತರಗತಿ ವಿದ್ಯಾರ್ಥಿಗಳಿಗಿರುವ ಎಸ್ಸೆಸ್ಸೈಟಿಸಿ ಎಂಟ್ರಿ  ತರಬೇತಿ ಶಿಬಿರ ಕುಂಜತ್ತೂರು ಹೈಯರ್ ಸೆಕಂಡರಿ ಶಾಲೆಯಲ್ಲಿ ಬುಧವಾರ ಆರಂಭಗೊಂಡಿತು.

ಶಾಲಾ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುಲ್ ರಹ್ಮಾನ್ ಉದ್ಯಾವರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯೋಪಾಧ್ಯಾಯ, ಅಧ್ಯಾಪಕ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಉದ್ಯಾವರ ಗುಡ್ಡೆ ಶಾಲೆ ಹಾಗು ಕುಂಜತ್ತೂರು ಶಾಲೆಯ 23 ಮಕ್ಕಳು ತರಬೇತಿಯ ಪ್ರಯೋಜನವನ್ನು ಪಡೆದುಕೊಂಡರು. ಹಾರ್ಡವೇರ್, ಎನಿಮೇಶನ್, ಕನ್ನಡ ಮಲಯಾಳಂ ಟೈಪಿಂಗ್, ಸೈಬರ್ ಸೇಫ್ಟಿ ಹಾಗೂ ಇಲೆಕ್ಟ್ರಾನಿಕ್ಸ್ ವಿಷಯಗಳಲ್ಲಿ ತರಬೇತಿ ನೀಡಲಾಯಿತು. ಬೆಳಿಗ್ಗೆ 10 ಗಂಟೆಗೆ ಆರಂಭಗೊಂಡ ತರಬೇತಿ ಶಿಬಿರ ಸಂಜೆ 4.30 ಗಂಟೆ ತನಕ ನಡೆಯಿತು. ಶಾಲೆಯಲ್ಲೇ ವಿದ್ಯಾರ್ಥಿಗಳಿಗೆ ಊಟೋಪಚಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

LEAVE A REPLY