ನಿಲ್ದಾಣ ಬಳಿ ಕೇಬಲ್ ಕಟ್ : ರೈಲು ಸಂಚಾರ ಅಸ್ತವ್ಯಸ್ತ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕಾಸರಗೋಡು ರೈಲು ನಿಲ್ದಾಣ ಬಳಿ ರೈಲ್ವೇ ಇಲಾಖೆಗೆ ಸೇರಿದ ಸ್ಥಳದಲ್ಲಿ ಜೆಸಿಬಿ ಬಳಸಿ ಕಾಮಗಾರಿ ನಡೆಸುತ್ತಿದ್ದ ಸಂದರ್ಭ ಮಣ್ಣಿನಡಿ ಹಾಕಿದ್ದ ರೈಲ್ವೇ ಸಿಗ್ನಲ್ ಕೇಬಲುಗಳು ಕಡಿದ ಪರಿಣಾಮ ಸಿಗ್ನಲ್ ಲಭಿಸದೆ ರೈಲು ಸೇವೆ ಅಸ್ತವ್ಯಸ್ತಗೊಂಡಿತು.

ಸಿಗ್ನಲ್ ಲಭಿಸದ ಕಾರಣ ಶುಕ್ರವಾರ ಬೆಳಗ್ಗೆ ಮಂಗಳೂರಿಗೆ ಹೋಗುವ ಪುದುಶ್ಶೇರಿ ಎಕ್ಸಪ್ರೆಸ್ ರೈಲನ್ನು ತೃಕ್ಕನ್ನಾಡಿನಲ್ಲೂ, ಚೆನ್ನೈ ಎಕ್ಸಪ್ರೆಸ್ ರೈಲನ್ನು ಕೋಟಿಕುಳಂನಲ್ಲೂ ನಿಲುಗಡೆಗೊಳಿಸಬೇಕಾಯಿತು. ಮಂಗಳೂರಿನಿಂದ ಕಾಸರಗೋಡಿನತ್ತ ಬರುವ ಹಲವು ರೈಲುಗಳನ್ನು ವಿವಿಧ ನಿಲ್ದಾಣಗಳಲ್ಲಿ ನಿಲುಗಡೆಗೊಳಿಸಬೇಕಾಯಿತು.