ಈಜಿಪ್ತ್ ರೈಲುಗಳೆರಡು ಡಿಕ್ಕಿಗೆ 44 ಮಂದಿ ಬಲಿ

ಕೈರೋ : ಈಜಿಪ್ತಿನ ಕರಾವಳಿ ನಗರ ಅಲೆಕ್ಸಾಂಡ್ರಿಯಾದಲ್ಲಿ ಎರಡು ರೈಲುಗಳು ಡಿಕ್ಕಿಯಾದ ಭೀಕರ ದುರ್ಘಟನೆಯಲ್ಲಿ ಕನಿಷ್ಠಪಕ್ಷ 44 ಮಂದಿ ಮೃತಪಟ್ಟಿದ್ದು, 179ಕ್ಕೂ ಎಹಚ್ಚು ಮಂದಿ ಗಾಯಗೊಂಡಿದ್ದಾರೆ. ರೈಲು ದುರಂತದಲ್ಲಿ ಮಡಿದವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ರೈಲುಗಳ ಅವಶೇಷ ತೆರವುಗೊಳಿಸಿದ ನಂತರವೇ ಒಟ್ಟು ಸಾವು-ನೋವಿನ ಸಮಗ್ರ ಮಾಹಿತಿ ಲಭ್ಯವಾಗಲಿದೆ ಎಂದು ಈಜಿಪ್ತ್ ಸರಕಾರ ಹೇಳಿದೆ.