ಎಸ್ಪಿಸಿಯಿಂದ ಶುಭಯಾತ್ರೆಯ ಟ್ರಾಫಿಕ್ ನಿಯಮ ತಿಳುವಳಿಕೆ

 

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಶುಭಯಾತ್ರೆ ಎಂಬ ಟ್ರಾಫಿಕ್ ಬೋಧನಾ ಕಾರ್ಯಕ್ರಮವನ್ನು ಅಡೂರು ಸರಕಾರಿ ಹೈಯರ್ ಸೆಕೆಂಡರೀ ಶಾಲೆಯ ಸ್ಟೂಡೆಂಟ್ ಪೆÇಲೀಸ್ ಕೆಡೇಟುಗಳು ಆದೂರು ಜನಮೈತ್ರಿ ಪೆÇಲೀಸರ ಸಹಕಾರದೊಂದಿಗೆ ನಡೆಸಿದರು.

ಅಡೂರು ಬಸ್ ತಂಗುದಾಣ ಜಂಕ್ಷನ್ನಿನಲ್ಲಿ ಟ್ರಾಫಿಕ್ ನಿಯಮಗಳನ್ನು ಪಾಲಿಸಬೇಕಾದ ವಿಚಾರಗಳನ್ನು ಒಳಗೊಂಡ ಕರಪತ್ರವನ್ನು ಮತ್ತು ಜೊತೆಗೆ ಮಿಠಾಯಿಯನ್ನು ಹಂಚಿದರು. ಬಸ್, ಲಾರಿ, ಕಾರು, ಜೀಪು, ಶಾಲಾ ವಾಹನ, ಅಟೋ, ಬೈಕ್ ಮೊದಲಾದ ವಾಹನಗಳ ಚಾಲಕರಿಗೆ ಬೋಧನೆ ನೀಡಿದರು. ಅಮಿತ ವೇಗ, ಅಜಾಗರೂಕತೆಯಿಂದ ವಾಹನ ಓಡಿಸಬಾರದು, ಇಕ್ಕಟ್ಟಾದ ಮತ್ತು ವಾಹನ ದಟ್ಟಣೆಯ ರಸ್ತೆಯಲ್ಲಿ ಗಮನಿಸಿ ವಾಹನ ಓಡಿಸಬೇಕು, ಮದ್ಯಪಾನ ಮಾಡಿ ವಾಹನ ಓಡಿಸಬಾರದು, ಸೀಟ್ ಬೆಲ್ಟ್ ಹಾಕಿ ವಾಹನ ಓಡಿಸಬೇಕು, ಪರವಾನಗಿ ಇಲ್ಲದೆ ವಾಹನ ಓಡಿಸಬಾರದು, ಎಡಭಾಗದ ಮೂಲಕ ಓವರ್ಟೇಕ್ ಮಾಡಬಾರದು, ವಾಹನ ಓಡಿಸುವಾಗ ಮೊಬೈಲ್ ಉಪಯೋಗಿಸಬಾರದು, ದ್ವಿಚಕ್ರ ವಾಹನ ಓಡಿಸುವಾಗ ಹೆಲ್ಮೆಟ್ ಧರಿಸಬೇಕು, ಎಲ್ಲಾ ಟ್ರಾಫಿಕ್ ನಿಯಮಗಳನ್ನು ಪಾಲಿಸಬೇಕು ಮೊದಲಾದ ಸೂಚನೆಗಳನ್ನು ಒಳಗೊಂಡ ಕರಪತ್ರವನ್ನು ಎಲ್ಲರಿಗೂ ವಿತರಿಸಿ ಶುಭಕೋರಿದರು.

ಈ ಸಂದರ್ಭ ಆದೂರು ಪೆÇಲೀಸರು ಹಾಗೂ ಅಧಿಕಾರಿಗಳು ಜೊತೆಗಿದ್ದರು.

LEAVE A REPLY