ಬೈಕಂಪಾಡಿ ಪೇಟೆ ಗೋಳು

ದಿನ ಕಳೆಯುತ್ತಿದ್ದಂತೆ ಬೈಕಂಪಾಡಿ ಪೇಟೆಯಲ್ಲಿ ಟ್ರಾಫಿಕ್ ಸಮಸ್ಯೆ ತುಂಬಾ ತಲೆ ನೋವು ತರುತ್ತಿದೆ  ಮುಖ್ಯವಾಗಿ ಇಲ್ಲಿ ವಾಹನಗಳ ನಿಬಿಡತೆಯಿಂದ ಜನ ರಸ್ತೆ ದಾಟುವುದು ಸಾಹಸವೆಂಬಂತಾಗಿದೆ
ಇನ್ನೊಂದೆಡೆ ಪೇಟೆ ಸುತ್ತಮುತ್ತ ಎಲ್ಲಿ ನೋಡಿದರೂ ಧೂಳು ಆವರಿಸಿಕೊಂಡಿದೆ  ಅದರಲ್ಲಿಯೂ ಎಪಿಎಂಸಿ ಎದುರಿನ ಅವಸ್ಥೆ ಹೇಳಿ ಪ್ರಯೋಜನವಿಲ್ಲ  ಲಾರಿಗಳು ಲಂಗಾರು ಹಾಕುವ ಸ್ಥಳದಲ್ಲಿ ಎಲ್ಲಿ ನೋಡಿದರೂ ಹೊಂಡಗಳೇ ಕಾಣ ಸಿಗುತ್ತಿದೆ  ಪ್ರಯಾಣಿಕರು ಬಸ್ ಹತ್ತುವಲ್ಲಿ, ಇಳಿಯುವಲ್ಲಿ ಎಲ್ಲಿ ನೋಡಿದರೂ ಧೂಳು ಆವರಿಸಿ ಕಾಲಿಡದಂತಾಗಿದೆ  ಹೊಸ ಸೇತುವೆ ಆದ ನಂತರ ಹಳೆ ರಸ್ತೆ ಹಾಗೆನೇ ಇರುವುದರಿಂದ ಇನ್ನೊಂದೆಡೆ ರಸ್ತೆ ಬದಿ ತಂದು ಹಾಕಿದ ಕೆಂಪು ಮಣ್ಣು ಎಲ್ಲಾ ಹರಡಿ ಎಲ್ಲಿ ನೋಡಿದರೂ ಜನರಿಗೆ ಧೂಳಿನ ಸಿಂಚನ
ಒಟ್ಟಿನಲ್ಲಿ ಬೈಕಂಪಾಡಿ ಪೇಟೆ ಎಂದೋ ಸರಿಯಾಗುತ್ತದೆಯೋ

  • ಸುಜನ್ ಮೆಂಡನ್  ಮೀನಕಳಿಯ