3 ದಿನದಿಂದ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ ಸಂಚಾರಕ್ಕೆ ತೊಡಕು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಕರ್ನಾಟಕದಿಂದ ಕೇರಳಕ್ಕೆ ಸರಕು ಸಾಗಾಟ ಮಾಡುತ್ತಿದ್ದ ಲಾರಿಯೊಂದು ತಲಪಾಡಿಯ ಕೇರಳ ಆರ್ ಟಿ ಒ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಟ್ಟು ನಿಂತು ಮೂರು ದಿನಗಳೇ ಕಳೆದಿದೆ. ರಸ್ತೆ ಮಧ್ಯದಲ್ಲಿಯೇ ಲಾರಿ ಬಾಕಿಯಾಗಿರುವುದರಿಂದ ವಾಹನ ಸಂಚಾರಕ್ಕೆ ತೊಡಕಾಗಿದೆ. ಕೆಟ್ಟುಹೋದ ಲಾರಿಯನ್ನು ಬದಿಗೆ ಸರಿಸದೇ ಇರುವುದು ವಾಹನ ಚಾಲಕರ ಆಕ್ರೊಶಕ್ಕೂ ಕಾರಣವಾಗಿದೆ. ಸಂಬಂಧಪಟ್ಟವರು ಕೂಡಲೇ ಇತ್ತ ಗಮನ ಹರಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.