ಗಣ್ಯರಿಗಾಗಿ ಟ್ರಾಫಿಕ್ ಕಂಟ್ರೋಲ್ ಮಾಡುವುದು ಅಮಾನವೀಯ

ವಿಐಪಿ ಸಂಸ್ಕøತಿ ಕೊನೆಗಾಣಿಸುವ ಹಲವು ಕ್ರಮಗಳಿಗೆ ಅಲ್ಲಲ್ಲಿ ಚಾಲನೆ ನೀಡಲಾಗಿದೆ. ಕೆಂಪುದೀಪಕ್ಕೆ ಕೊಕ್ ಕೊಟ್ಟಿದ್ದು ಇಂಥ ಒಂದು ಕ್ರಮ. ಆದರೆ ಅತಿಗಣ್ಯರು ಸಂಚರಿಸುವಾಗ ಟ್ರಾಫಿಕ್ ಕಂಟ್ರೋಲ್ ಮಾಡುವುದು. ಅವರಿಗಾಗಿ ಸಂಚಾರವನ್ನು ಸ್ಥಗಿತಗೊಳಿಸುವುದು ನಡದೇ ಇದೆ. ಅ್ಯಂಬುಲೆನ್ಸುಗಳಿಗೂ ಇದರ ಬಿಸಿ ತಟ್ಟಿ ರೋಗಿಗಳು ಯಮ ಸಂಕಟ ಅನುಭವಿಸುವ ಪ್ರಕರಣಗಳಿಗೆ ಕೊರತೆ ಇಲ್ಲ  ಇತ್ತೀಚೆಗೆ ಪೊಲೀಸ್ ಆಯುಕ್ತರು ವಿಐಪಿ ಸಂಚಾರದ ವೇಳೆ ತುರ್ತು ಚಿಕಿತ್ಸಾ ವಾಹನಗಳ ಓಡಾಟಕ್ಕೆ ತಡೆಯೊಡ್ಡಬಾರದು ಎಂದು ಆದೇಶಿಸಿದ್ದಾರೆ  ರೋಗಿಗಳ ಮೇಲೆ ಕಾಳಜಿ ತೋರುವ ಮನುಷ್ಯತ್ವ ಮನದಾಳದಿಂದ ಬರಬಾರದೇ  ಇಲಾಖೆಯ ಸುತ್ತೋಲೆಗಳಿಗೆ ಕಾಯುವಷ್ಟು ನಮ್ಮ ಪೊಲೀಸ್ ವ್ಯವಸ್ಥೆ ಅಸೂಕ್ಷ್ಮವಾಗಿದೆಯೇ  ಪ್ರತಿ ಇಲಾಖೆಯಲ್ಲಿಯೂ ಕಾನೂನು ಮತ್ತು ಸಮಾಜಕ್ಕೆ ತೊಡಕಾದಂತೆ ಮಾನವೀಯ ವರ್ತನೆ ತೋರಲು ಅಧಿಕಾರಿಗಳು ಹಿಂದೇಟು ಹಾಕಕೂಡದು

  • ಎಂ ಮನೋಹರ ಸುವರ್ಣ  ಬಿರ್ಕನ್ನಕಟ್ಟೆ ಮಂಗಳೂರು