ಬ್ಯಾಂಕ್ ಮುಂಬಾಗದಲ್ಲಿ ಡಿ 14ಕ್ಕೆ ವ್ಯಾಪಾರಿಗಳ ಬೃಹತ್ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : 500 ಹಾಗೂ 1000 ರೂ ರದ್ದುಗೊಳಿಸಿರುವುದರಿಂದ ವ್ಯಾಪಾರಿಗಳು ಹೆಚ್ಚಿನ ತೊಂದರೆಗೀಡಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಇದರ ವಿರುದ್ದ ಕೇರಳ ವ್ಯಾಪಾರಿಗಳ ಸಂಘಟನೆಯ ನೇತೃತ್ವದಲ್ಲಿ ಡಿಸಂಬರ್ 14ಕ್ಕೆ ನೋಟು ವಿತರಿಸುವ ವಿದ್ಯಾನಗರ ಬ್ಯಾಂಕ್ ನ ಮುಂಬಾಗದಲ್ಲಿ ಧರಣಿಯನ್ನು ಹಮ್ಮಿಕೊಂಡಿರುವುದಾಗಿ ಸಂಬಂಧಪಟ್ಟವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ನೋಟು ಅಮಾನ್ಯ ನಂತರ ವ್ಯಾಪಾರ ಕುಂಠಿತಗೊಂಡು ಪರದಾಡಬೇಕಾದ ಪರಿಸ್ಥಿತಿ ಬಂದಿರುವುದಾಗಿ ಸಂಘಟನೆಯ ಪದಾಧಿಕಾರಿಗಳು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.

ವಿದ್ಯಾನಗರ ಸರಕಾರಿ ಕಾಲೇಜಿನಿಂದ ವ್ಯಾಪಾರಿಗಳ ಪ್ರತಿಭಟನಾ ಮೆರವಣಿಗೆ ಹೊರಡಲಿದೆ.

ಕೇರಳ ವ್ಯಾಪಾರಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಆಹ್ಮದ್ ಶೆರೀಫ್ ಧರಣಿಯನ್ನು ಉದ್ಘಾಟಿಸಲಿದ್ದಾರೆಂದು ಸಂಘಟಕರು ಸುದ್ದಿಗಾರರಿಗೆ ತಿಳಿಸಿದ್ದಾರೆ.