ಕುಂದಾಪುರ ವಿದ್ಯಾರ್ಥಿ ನಿಲಯ ದಾಂದಲೆ ಹಿಂದಿನ ಪ್ರೇರಣ ಶಕ್ತಿಯನ್ನು ಪತ್ತೆ ಹಚ್ಚಿರಿ

ಕುಂದಾಪುರ ನೆಹರು ಮೈದಾನದಲ್ಲಿರುವ ಪ ಜಾತಿ ಪ ಪಂಗಡದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳು ಕೊಠಡಿಗಳನ್ನು ಹಾನಿಗೊಳಿಸಿ ಕೊಠಡಿಯ ಸೊತ್ತುಗಳಾದ ಫ್ಯಾನ್ ಟ್ಯೂಬ್ ಲೈಟುಗಳನ್ನು ಒಡೆದುದಲ್ಲದೆ ಕಪಾಟಿನಲ್ಲಿರುವ ಪುಸ್ತಕಗಳನ್ನು ಹಾಗೂ ವಸ್ತುಗಳನ್ನು ಚಿಂದಿ ಮಾಡಿರುತ್ತಾರೆ ಅಲ್ಲದೆ ಗೋಡೆಯ ಮೇಲೆ ಅಶ್ಲೀಲ ಬರಹಗಳನ್ನು ಬರೆಯಲಾಗಿದೆ ಇದರಿಂದಾಗಿ ತುಂಬಾ ಆರ್ಥಿಕ ನಷ್ಟವುಂಟಾಗಿದೆ ಸದ್ರಿ ವಿದ್ಯಾರ್ಥಿ ನಿಲಯವನ್ನು ಬೇರೆಡೆಗೆ ಹಂಗಳೂರಿಗೆ ಸ್ಥಳಾಂತರಿಸಿದ ಕಾರಣ ಕೊನೆಯ ದಿನವಾದ 8-9-2017ರಂದು ವಿದ್ಯಾರ್ಥಿಗಳು ಈ ಹೀನ ಕೃತ್ಯ ನಡೆಸಿರುವುದು ಖಂಡನೀಯವಾಗಿದೆ ಸರಕಾರದಿಂದ ಉಚಿತವಾಗಿ ವಿದ್ಯಾಭ್ಯಾಸ ಹಾಗೂ ವಸತಿಯನ್ನು ಪಡೆಯುವ ವಿದ್ಯಾರ್ಥಿಗಳ ಈ ಹೀನಕೃತ್ಯ ನ್ಯಾಯ ಸಮ್ಮತವಾದುದಲ್ಲ ಅಲ್ಲದೇ ವಿದ್ಯಾರ್ಥಿಗಳು ಈ ರೀತಿಯಲ್ಲಿ ನಡೆದುಕೊಳ್ಳುವರೇ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರ ಪ್ರೇರಣೆ ಇರಬಹುದೆಂಬ ಅನುಮಾನವಿದೆ ಒಂದು ಕಡೆಯಿಂದ ಇನ್ನೊಂದೆಡೆಗೆ ನಿಲಯ ಸ್ಥಳಾಂತರಗೊಳ್ಳುವಾಗ ಮೇಲ್ವಿಚಾರಕರು ನಿಲಯದ ಸೊತ್ತು ಹಾಗೂ ವಿದ್ಯಾರ್ಥಿಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಸದ್ರಿ ಕಟ್ಟಡವನ್ನು ಮೇಲಧಿಕಾರಿಯವರಿಂದ ಪರಿಶೋಧಿಸಿ ಕಟ್ಟಡವನ್ನು ಹಸ್ತಾಂತರವಾಗುವವರೆಗೂ ಮೇಲ್ವಿಚಾರಕರು ಜವಾಬ್ದಾರಿಯಾಗಿರುತ್ತಾರೆ ಆದರೆ ಸದ್ರಿ ಮೇಲ್ವಿಚಾರಕರು ತಮ್ಮ ಜವಾಬ್ದಾರಿ ಮರೆತು ವಿದ್ಯಾರ್ಥಿಗಳಿಂದ ಈ ಹೀನಕೃತ್ಯ ನಡೆಸಿದ್ದಾರೆಂಬ ಬಗ್ಗೆ ಅನುಮಾನ ಇರುವುದರಿಂದ ಸದ್ರಿಯವರನ್ನು ನೇರ ಹೊಣೆಗಾರರನ್ನಾಗಿಸಿ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಾಗಿ ಆಗ್ರಹ

  • ಗೋವಿಂದ ಮಾರ್ಗೋಳಿ  ಸಂಚಾಲಕರು
    ಕರ್ನಾಟಕ ದಲಿತ ಸಂಘ ಸಮಿತಿ (ರಿ) ಬಸ್ರೂರು