ಪೊಲೀಸರ ವಿಜಾಪುರಕ್ಕೆ ಕಳಿಸುತ್ತೇನೆಂದ ನಳಿನ್ ಕ್ಷಮೆಯಾಚನೆಗೆ ಆಗ್ರಹ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : “ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಪೋಲೀಸರನ್ನು ವಿಜಾಪುರಕ್ಕೆ ಕಳುಹಿಸುತ್ತೇನೆಂದು ಮೂಡುಬಿದಿರೆಯಲ್ಲಿ ಹೇಳಿಕೆ ನೀಡಿರುವ ಸಂಸದ ನಳಿನ್ ವಿಜಾಪುರದ ಜನತೆಯಲ್ಲಿ ಕ್ಷಮೆಯಾಚಿಸಬೇಕು” ಎಂದು ಮುಲ್ಕಿ ನಗರ ಪಂಚಾಯಿತಿ ಸದಸ್ಯ ಅಶೋಕ್ ಪೂಜಾರ್ ಆಗ್ರಹಿಸಿದ್ದಾರೆ.

“ವಿಜಾಪುರ ಪ್ರದೇಶವು ಸ್ವಾತಂತ್ರ್ಯ ಸಂಗ್ರಾಮಕ್ಕೆ ಬಹಳಷ್ಟು ಕೊಡುಗೆಗಳನ್ನು ನೀಡಿದೆ. ಉತ್ತಮ ಸಂಸ್ಕಾರಯುತ ಪ್ರದೇಶವಾದ ವಿಜಾಪುರದ ಜನತೆ ದೇಶದ ಅಭಿವೃದ್ಧಿಗೆ ಬಹಳಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಕಾರಣಾಂತರಗಳಿಂದ ಇಲ್ಲಿನ ಜನತೆ ಉದ್ಯೋಗ ಆಶ್ರಯಿಸಿ ಅನೇಕ ಜಿಲ್ಲೆ ಹಾಗೂ ರಾಜ್ಯಗಳಿಗೆ ವಲಸೆ ಹೋಗಿ ಜೀವನ ನಡೆಸುತ್ತಿದ್ದಾರೆ. ಸಂಸದ ಪ್ರಾಮಾಣಿಕ ವ್ಯಕ್ತಿತ್ವದ ವಿಜಾಫುರದ ಶ್ರಮ ಜೀವಿಗಳ ಬದುಕನ್ನು ಕೀಳಾಗಿ ಕಂಡು ನಮ್ಮ ಪ್ರದೇಶವನ್ನು ಅವಮಾನಿಸಿರುವುದು ವಿಜಾಪುರದ ಮೂಲ ನಿವಾಸಿಗಳಾದ ನಮಗೆ ಬಹಳ ನೋವನ್ನು ತಂದಿದೆಯೆಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದು, ಕೂಡಲೇ ಸಂಸದ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಸಂಸದರ ವಿರುದ್ಧ ಪ್ರತಿಭಟನೆ ನಡೆಸಲು ಹಿಂಜರಿಯುದಿಲ್ಲ” ಎಂದು ಅವರು ತಿಳಿಸಿದ್ದಾರೆ.