ಗೋಕರ್ಣ ಸಮುದ್ರದಲ್ಲಿ ಈಜಲು ಹೋಗಿ ಅಪಾಯಕ್ಕೆ ಸಿಲುಕಿದ್ದ ಪ್ರವಾಸಿಗರ ರಕ್ಷಣೆ

ನಮ್ಮ ಪ್ರತಿನಿಧಿ ವರದಿ

ಗೋಕರ್ಣ : ಕ್ಷೇತ್ರಕ್ಕೆ ಆಗಮಿಸಿದ್ದ ಆಂಧ್ರ ತೆಲಂಗಾಣ ಮೂಲದ 4 ಮಂದಿ ಪ್ರವಾಸಿಗರು ಸೋಮವಾರ ಮುಖ್ಯ ಸಮುದ್ರದಲ್ಲಿ ಈಜಾಡುತ್ತಿರುವಾಗ ಸುಳಿಗೆ ಸಿಲುಕಿ ಮುಳುಗುತ್ತಿರುವ ಸಂದರ್ಭದಲ್ಲಿ ಇಲ್ಲಿನ ಸ್ಪೀಡ್ ಬೋಟ್ ಚಾಲಕರಾದ ಶೇಖರ ಹಾಗೂ ಮೀನುಗಾರ ಅಶೋಕ ಹಾಗೂ ಪ್ರವಾಸೀ ಮಿತ್ರ ಗಜೇಂದ್ರರ ಪ್ರಯತ್ನದಿಂದ ಸಾವಿನ ದವಡೆಯಿಂದ ಪಾರಾಗಿದ್ದಾರೆ.

ರಮೇಶ ಎಂ ಡಿ (40), ಭಾಗ್ಯಪ್ರಕಾಶ (19), ರಾಜೇಶ (22), ವಿವೇಕ್ (43) ಪ್ರಾಣಾಪಾಯದಿಂದ ಪಾರಾದವರು. ಇಲಾಖೆಯ ಮೂಲಕ ನಿಯೋಜಿತಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದ ಪ್ರವಾಸಿ ಮಿತ್ರ ಗಜೇಂದ್ರರ ಎಚ್ಚರಿಕೆಯನ್ನೂ ಕಡೆಗಣಿಸಿ ಈಜಾಡಲು ನೀರಿಗಿಳಿದ 4 ಮಂದಿ ಸ್ನೇಹಿತರು ಮುಳುಗುತ್ತಿರುವುದನ್ನು ಮನಗಂಡ ಗಜೇಂದ್ರ ಸಮೀಪದ ಸ್ಪೀಡ್ ಬೋಟ್ ಚಾಲಕರನ್ನು ಕರೆದು ಮುಳುಗುತ್ತಿದ್ದವರಿಗೆ ಲೈಫ್ ಜಾಕೆಟ್ ಒದಗಿಸಿ ದಡಕ್ಕೆ ಸಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.