ತೂಮಿನಾಡು ಅರಬ್ ರೈಡರ್ಸ್ ಕ್ಲಬ್ ಸದಸ್ಯರಿಂದ ತ್ಯಾಜ್ಯ ವಿಲೇ

ಮಂಜೇಶ್ವರ :  ತೂಮಿನಾಡು ಪರಿಸರದಲ್ಲಿ ಪೆÇದರುಗಳು ತುಂಬಿ ಅಲ್ಲಲ್ಲಿ ತ್ಯಾಜ್ಯಗಳು ಶೇಖರಣೆಯಾಗಿ ನಾಗರಿಕರು ಮೂಗು ಮುಚ್ಚಿಕೊಂಡು ನಡೆದಾಡ ಬೇಕಾದ ದುರವಸ್ಥೆಯನ್ನು ಅರ್ಥೈಸಿಕೊಂಡ ತೂಮಿನಾಡು ಅರಬ್ ರೈಡರ್ಸ್ ಕ್ಲಬ್ ಸದಸ್ಯರು ರವಿವಾರದಂದು ಬೆಳಿಗ್ಗೆ ಇಡೀ ಪರಿಸರವನ್ನು ಶುಚಿಯಾಗಿಸುವ ಶ್ರಮದಾನಗೈದರು.

mjr2-arab-riders-clean2

ತೂಮಿನಾಡು ಜಂಕ್ಷನ್ ಭಾಗದಿಂದ ಅಲ್ ಫತಾಃ ಜುಮಾ ಮಸೀದಿತನಕ ಇರುವ ರಸ್ತೆ ಬದಿಯ ಪೆÇದರು ಹಾಗೂ ತ್ಯಾಜ್ಯಗಳನ್ನು ತೆರವುಗೊಳಿಸಿ ಅದಕ್ಕೆ ಬೆಂಕಿ ಹಾಕಿ ಹೊತ್ತಿಸಿದರು. ಗ್ರಾಮೀಣ ಕ್ರೀಡೆಯಾದ ಕಬಡ್ಡಿಯಲ್ಲಿ ಇದೀಗ ಮಿಂಚುತ್ತಿರುವ ಈ ಕ್ಲಬ್ಬಿನ  ಸದಸ್ಯರು ಸಮಾಜ ಸೇವೆಯಲ್ಲೂ ತಾವೇನೂ ಕಮ್ಮಿ ಇಲ್ಲವೆಂಬುದನ್ನು ಊರವರಿಗೆ ತೋರಿಸಿಕೊಟ್ಟಿದ್ದಾರೆ.

ಕ್ಲಬ್ ಅಧ್ಯಕ್ಷರ ಜತೆಯಾಗಿ ಸದಸ್ಯರಾದ ಜವಾದ್, ತನ್ಸೀರ್, ತಾಯಿರ್, ಅನ್ಸಾಫ್, ಶಿಹಾಬ್ ಮೊದಲಾದವರು ತ್ಯಾಜ್ಯ ತೆರವಿಗೆ ನೇತೃತ್ವ ನೀಡಿದರು. ಗ್ರಾ ಪಂ ವಾರ್ಡು ಸದಸ್ಯೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಾಡಿಸಬೇಕಾದ ಕೆಲಸಗಳನ್ನು ಇದೀಗ ಕ್ಲಬ್ ಸದಸ್ಯರೇ ಮಾಡಿರುವುದು ಜನಪ್ರತಿನಿಧಿಗಳ ಮುಖಕ್ಕೆ ಕೆಸರೆರೆಚಿದಂತಾಗಿದೆ.