ವಿದೇಶೀ ವಿಮಾನನಿಲ್ದಾಣಗಳಲ್ಲಿ ವಿವಸ್ತ್ರಗೊಳಿಸುವುದು ಅತಿಯಾಯಿತು

ಇತ್ತೀಚಿನ ವರ್ಷಗಳಲ್ಲಿ ಕೆಲವು ವಿದೇಶೀ ವಿಮಾನ ನಿಲ್ದಾಣಗಳಲ್ಲಿ ಹಲವು ಭಾರತೀಯ ಗಣ್ಯ ವ್ಯಕ್ತಿಗಳನ್ನು ತಪಾಸಣೆಗೊಳಪಡಿಸಿದ, ವಿವಸ್ತ್ರಗೊಳಿಸಿದ ಪ್ರಕರಣಗಳು ಕೇಳಿಬರುತ್ತಿವೆ. ಅವರು ರಾಜಕೀಯ ನಾಯಕರನ್ನೂ, ಸಚಿವರನ್ನೂ, ಸರಕಾರಿ ಅಧಿಕಾರಿಗಳನ್ನೂ, ಉದ್ಯಮಿಗಳನ್ನೂ ಬಿಟ್ಟಿಲ್ಲ. ಇಂತಹ ಕೆಲವು ಘಟನೆಗಳು ಸುದ್ದಿಯಾದರೆ ಮತ್ತೆ ಕೆಲವು ಸುದ್ದಿಯಾಗುವುದಿಲ್ಲ. ಅಮೇರಿಕದ ಆಹ್ವಾನದ ಮೇರೆಗೆ ಹೋದವರಿಗೂ ಈ ಅನುಭವ ಆಗಿದೆ
ಇತ್ತೀಚೆಗೆ ಜರ್ಮನಿಯ ಫ್ರಾಂಕ್‍ಫರ್ಟ್ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಭಾರತೀಯ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ತಪಾಸಣೆ ನಡೆಸಿದ ಅಮಾನವೀಯ ಸುದ್ದಿ ಬಂದ ಮೇಲೆ ವಿದೇಶಗಳಲ್ಲಿ ತಪಾಸಣೆ ಹೆಸರಲ್ಲಿ ನಡೆಯುತ್ತಿರುವ ದೌರ್ಜನ್ಯದ ವಿಷಯ ಮತ್ತೆ ಗಂಭೀರ ಚರ್ಚೆಗೆ ಬಂದಿದೆ. ವಿದೇಶಿ ಅಧಿಕಾರಿಗಳಿಗೆ ಬಟ್ಟೆ ಬಿಚ್ಚಿಸುವುದು ಒಂದು ದೊಡ್ಡ ವಿಷಯ ಅಲ್ಲದಿರಬಹುದು. ಆದರೆ ಭಾರತೀಯರಿಗೆ ಮುಖ್ಯವಾಗಿ ಭಾರತೀಯ ಮಹಿಳೆಯರಿಗೆ ಇದು ದೊಡ್ಡ ಅವಮಾನದ ಸಂಗತಿ. ನಮ್ಮಲ್ಲಿ ಕೆಲವೆಡೆ ಜಮೀನ್ದಾರರು, ರೌಡಿಗಳು, ವಸತಿ ನಿಲಯಗಳ ವಾರ್ಡನ್‍ಗಳು ಬಟ್ಟೆ ಬಿಚ್ಚಿಸಿದ ಸುದ್ದಿ ಕೇಳಿ ಬಂದಾಗ ಎಲ್ಲೆಡೆ ಅದರ ವಿರುದ್ಧ ಆಕ್ರೋಶ ಕೇಳಿಬರುತ್ತದೆ ಹಾಗೂ ಕಾನೂನಿನಂತೆ ಪೋಲೀಸರು ಅವರ ಮೇಲೆ ಕ್ರಮಕೈಗೊಳ್ಳುತ್ತಾರೆ. ಆದರೆ ವಿದೇಶಗಳಲ್ಲಿ ತಪಾಸಣೆ ಹೆಸರಲ್ಲಿ ನಡೆಯುವ ಕ್ರೌರ್ಯಕ್ಕೆ ಶಿಕ್ಷೆ ನೀಡುವವರ್ಯಾರು

  • ಪಿ ಜಯವಂತ ಪೈ  ಕುಂದಾಪುರ