ಟೋಲ್ಗೇಟ್ ಸಿಬ್ಬಂದಿಗೆ ಹಲ್ಲೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಸಾಸ್ತಾನ ಟೋಲ್ ಗೇಟ್ ಸಿಬ್ಬಂದಿಗೆ ನಾಲ್ವರ ತಂಡವೊಂದು ಹಲ್ಲೆ ನಡೆಸಿದೆ. ಗಾಯಗೊಂಡಿರುವ ಅಬ್ದುಲ್ ರೆಹಮಾನ್(58)ರನ್ನು ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭಾನುವಾರ ನಸುಕಿನ ಜಾವ 4 ಗಂಟೆಗೆ ಕಾರಿನಲ್ಲಿ ಬಂದ ನಾಲ್ವರ ತಂಡ ಸಾಸ್ತಾನ ಟೋಲ್ ಗೇಟ್  ಆ್ಯಂಬುಲೆನ್ಸ್ ಟ್ರಾಕ್ ಮೂಲಕ ತೆರಳಲು ಯತ್ನಿಸಿದೆ. ಇದನ್ನು ಕಂಡ ಅಬ್ದುಲ್ ಅದನ್ನು ನಿಲ್ಲಿಸಲು ಯತ್ನಿಸಿದ್ದರು. ಆಕ್ರೋಶಗೊಂಡ ತಂಡ ಕಾರಿನಿಂದ ಇಳಿದು ಹಲ್ಲೆ ನಡೆಸಿದೆ ಎಂದು ರೆಹಮಾನ್ ಕೋಟ ಠಾಣೆಗೆ ದೂರು ನೀಡಿದ್ದಾರೆ.

ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಚಾಲಕ ವಿಠಲ್ ಪೂಜಾರಿ ಎಂಬಾತ ಹೆಲ್ಮೆಟ್ಟಿನಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಇದೇ ವೇಳೆ ಪ್ರತಿದೂರು ನೀಡಿರುವ ವಿಠಲ್ ಪೂಜಾರಿ, ಜೊತೆಗೆ ಕಾರಿನಲ್ಲಿ ಬನ್ನಾಡಿಗೆ ತೆರಳುತ್ತಿದ್ದಾಗ ಟೋಲ್ ಗೇಟ್ ಸಿಬ್ಬಂದಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದಿದ್ದಾರೆ.

 

LEAVE A REPLY