ತಂಬಾಕು ಬೆಳೆಗಾರ ಆತ್ಮಹತ್ಯೆ

ಮೈಸೂರು : ತಂಬಾಕು ಬೆಳೆದು ಕೈಸುಟ್ಟುಗೊಂಡು ಸಾಲಗಾರನಾಗಿದ್ದ ಬೆಳೆಗಾರರೊಬ್ಬರು ಸಾಲಗಾರರ ಕಾಟ ತಾಳಲಾರದೆ ಮೆಣಸಿನ ಗಿಡಕ್ಕೆ ಸಿಂಪಡಿಸುವ ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಣಸೂರು ತಾಲೂಕು ಹರವೆ ಕಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.ಹರವೆ ಕಲ್ಲಹಳ್ಳಿ ಗ್ರಾಮದ ನಿವಾಸಿ ರಾಮಸ್ವಾಮಿ (55) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ತಮಗಿದ್ದ ಮೂರು ಎಕರೆ ಜಮೀನಿನಲ್ಲಿ ತಂಬಾಕು ಬೆಳೆಯುತ್ತಿದ್ದ ಅವರು ಅದರಿಂದ ಯಾವುದೇ ಲಾಭವನ್ನು ಪಡೆಯದೆ ನಷ್ಟಕ್ಕೊಳಗಾಗಿದ್ದರು.ತಂಬಾಕು ಬೆಳೆಯಲು ಮಾಕೋಡು ಗ್ರಾಮದ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ನಿಂದ ಸುಮಾರು ರು 4 ಲಕ್ಷ ಅಲ್ಲದೆ, ಕೈ ಸಾಲ ಸೇರಿದಂತೆ ರು 5 ಲಕ್ಷ ಸಾಲ ಮಾಡಿದ್ದರು ಎನ್ನಲಾಗಿದೆ.ಆದರೆ ಅವರ ನಿರೀಕ್ಷೆಯಂತೆ ಫಸಲು ಬಾರದೆ, ಇಳುವರಿಯೂ ಸಿಗದೆ ಸಂಪೂರ್ಣ ನಷ್ಟವಾಗಿತ್ತು.