ತಿರುಪತಿ ಲಡ್ಡು ಮತ್ತಷ್ಟು ದುಬಾರಿ

ತಿರುಪತಿ : ತಿರುಪತಿ ತಿಮ್ಮಪ್ಪನ ಪ್ರಸಾದ ರೂಪದಲ್ಲಿ ಭಕ್ತರಿಗೆ ನೀಡಲಾಗುತ್ತಿರುವ ಲಡ್ಡುವಿನ ದರದಲ್ಲಿ ಏರಿಕೆಯಾಗಲಿದೆ ಎಂಬ ಸುಳಿವು ಸಿಕ್ಕಿದೆ. ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ)ಯ ಮೂಲಗಳ ಪ್ರಕಾರ ಇದುವರೆಗೆ ಲಡ್ಡುವಿಗೆ ನೀಡಲಾಗಿರುವ ಸಬ್ಸಿಡಿಯನ್ನು ಹಿಂದಕ್ಕೆ ಪಡೆದು ಲಡ್ಡುವನ್ನು ಮೂಲ ಉತ್ಪಾದಿತ ಬೆಲೆಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆಯಂತೆ. ಇದಕ್ಕೆ ಕಾರಣ ಲಡ್ಡುವಿಗೆ ಬಳಸಲಾಗುತ್ತಿರುವ ಸಾಮಗ್ರಿಗಳ ವೆಚ್ಚದಲ್ಲಿ ಏರಿಕೆಯಾಗಿರುವುದು.

ಒಂದು ಲಡ್ಡುವಿನ ತಯಾರಿ ವೆಚ್ಚ 34.70. ಸಬ್ಸಿಡಿಯನ್ನು ಹಿಂದಕ್ಕೆ ಪಡೆದುಕೊಂಡು ಲಡ್ಡುವನ್ನು ಅದೇ ಬೆಲೆಗೆ ಮಾರಾಟ ಮಾಡುವುದು ಅಥವಾ ಪ್ರತಿ ಲಡ್ಡುವನ್ನೂ 40 ರೂಪಾಯಿಗೆ ಮಾರಾಟ ಮಾಡುವುದೇ ಎಂಬ ಬಗ್ಗೆ ಟಿಟಿಡಿ ಶೀಘ್ರವೇ ನಿರ್ಧರಿಸಲಿದೆ.

2007ರ ಬಳಿಕ ಲಡ್ಡುವಿಗೆ ಬಳಸುವ ತುಪ್ಪದ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದು, ಲಡ್ಡುವಿನ ದರವನ್ನು ಈ ಹಿಂದೆ 10ರಿಂದ 25 ರೂಪಾಯಿಗೆ ಏರಿಕೆ ಮಾಡಲಾಗಿತ್ತು.