ಕ್ರೈಸ್ತರ ಮೇಲೆ ಟಿಪ್ಪು ದೌರ್ಜನ್ಯ

ಟಿಪ್ಪು ಸುಲ್ತಾನ್ ಕೆನರಾ ಕ್ರೈಸ್ತರ ಮೇಲೆ ನಡೆಸಿದ್ದನ್ನೆನ್ನಲಾದ ದೌರ್ಜನ್ಯದ ಕುರಿತು ಕರಾವಳಿ ಕ್ರೈಸ್ತರು ಸಿನೆಮಾವೊಂದು ತಯಾರಿಸಿ ಅದನ್ನು ಬೆಳಕಿಗೆ ತರಲಿದ್ದಾರೆನ್ನುವ ವಾರ್ತೆ ಪ್ರಕಟವಾಗಿದೆ ಈ ದೌರ್ಜನ್ಯ ನಡೆದಿದೆ ಎನ್ನಲಾದುದು ಸುಮಾರು 240 ವರ್ಷಗಳ ಹಿಂದೆ. ಆಗ ಈಗಿರುವ ಕೆನರಾ ಕ್ರೈಸ್ತರ ಪೂರ್ವಜರು ಕ್ರೈಸ್ತರಾಗಿದ್ದರೇ ಎನ್ನುವುದು ಸಂಶಯಾಸ್ಪದ. ಹಾಗಿದ್ದರೂ ಅನ್ನಾಯವನ್ನು ಪ್ರತಿಭಟಿಸುವುದು ನ್ಯಾಯವೇ ಸರಿ ಆದರೆ ನನಗೊಂದು ಸಂದೇಹ. ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕ್ರೈಸ್ತರ ಮೇಲೆ ಅಮಾನುಷ ದಾಳಿಗಳಾಗಿದೆ ವಯೋವೃದ್ಧ ನನ್ನುಗಳೂ ಸೇರಿದಂತೆ ಅನೇಕರ ಮೇಲೆ ಹಲ್ಲೆಗಳಾಗಿವೆ ಚರ್ಚುಗಳ ಮೇಲೆ ಕಲ್ಲೆಸೆಯಲಾಗಿದೆ ಮಂಗಳೂರಿನ ಎಡೋರೇಶನ್ ಶಿಲುಬೆಗಳನ್ನು ಧ್ವಂಸಗೊಳಿಸುವುದು ಲೂರ್ದು ಮಾತೆಯ ಪ್ರತಿಮೆಗೆ ಕಲ್ಲೆಸೆಯುವುದು ಮುಂತಾದವು ನಡೆದಿದೆ ಮತಾಂತರದ ನೆಪದಲ್ಲಿ ಫಾಸ್ಟರುಗಳ ಮೇಲೆ ಅಕ್ರಮಣ ನಡೆಸಲಾಗಿದೆ ಕೆನರಾ ಕ್ರೈಸ್ತರು ಈ ಕುರಿತು ಒಂದೂ ಸಿನೆಮಾ ತಯಾರಿಸಲೆಂದು ಆಶಿಸಲೇ

  • ಅದಮಾರು ಶ್ರೀಪತಿ ಆಚಾರ್ಯ  ಶಿರಿಬೀಡಿ ಉಡುಪಿ