ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಚರಂಡಿಗೆ

ಮುಲ್ಕಿ : ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಬಟ್ಟಕೋಡಿ ಎಂಬಲ್ಲಿ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗಳಿದಿದೆ. ಕಿನ್ನಿಗೋಳಿ ಪರಿಸರದಲ್ಲಿ ಶನಿವಾರ ಬೆಳಗ್ಗೆ ಸುರಿದ ಭಾರೀ ಮಳೆಗೆ ಹೆದ್ದಾರಿಯಲ್ಲಿ ಕೃತಕ ನೆರೆ ಸೃಷ್ಠಿಯಾಗಿದ್ದು, ಸೂಕ್ತ ಚರಂಡಿಯಿಲ್ಲದೆ ಕಿನ್ನಿಗೋಳಿಯಿಂದ ಮುಲ್ಕಿ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಚಾಲಕ ವಾಹನವೊಂದಕ್ಕೆ ಸೈಡ್ ಕೊಡುವಾಗ ನಿಯಂತ್ರಣ ತಪ್ಪಿ ಚರಂಡಿಗೆ ಇಳಿಸಿದ್ದಾನೆ. ಘಟನೆಯಿಂದ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಕೆಲ ಹೊತ್ತು ಅಸ್ತವ್ಯಸ್ತಗೊಂಡಿತ್ತು.