ಅಪ್ಪನಾಗುತ್ತಿರುವ ಟೈಗರ್ ಶ್ರಾಫ್

ಟೈಗರ್ ಶ್ರಾಫ್ ಅಪ್ಪನಾಗುತ್ತಿದ್ದಾನೆ ! ಹಾಗಂತ ಇನ್ನೂ ಮದುವೆನೇ ಆಗದ ಟೈಗರ್ ಅಪ್ಪನಾಗುತ್ತಿರುವ ಬಗ್ಗೆ ಬೇರೆ ಯೋಚಿಸುವ ಅಗತ್ಯ ಇಲ್ಲ. ಆತನ ಈ ಹೊಸ ರೋಲ್ ಸದ್ಯ ತೆರೆಗಷ್ಟೇ ಸೀಮಿತ.

ಟೈಗರ್ ಈಗ ಆಕ್ಷನ್ ಥ್ರಿಲ್ಲರ್ `ಭಾಗೀ-2′ ಚಿತ್ರದಲ್ಲಿ ನಟಿಸುತ್ತಿದ್ದು ಮೊದಲ ಬಾರಿಗೆ ಆತ ಚಿಕ್ಕ ಹುಡುಗಿಯ ಅಪ್ಪನಾಗಿ ಕಾಣಿಸಿಕೊಳ್ಳುತ್ತಿದ್ದಾನೆ. ಕೊರಿಯೋಗ್ರಾಫರ್ ಟರ್ನಡ್ ಡೈರೆಕ್ಟರ್ ಅಹ್ಮದ್ ಖಾನ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು ಈ ಚಿತ್ರದಲ್ಲಿ ಭರಪೂರ ಆಕ್ಷನ್ ಜೊತೆಗೇ ಸಾಕಷ್ಟು ಡ್ಯಾನ್ಸ್ ಕೂಡಾ ಇರುವ ನಿರೀಕ್ಷೆ ಇದೆ. ಸಿನಿಮಾದಲ್ಲಿ ಮೊದಲ ಬಾರಿಗೆ ಟೈಗರ್ ಆತನ ಗರ್ಲ್‍ಫ್ರೆಂಡ್ ದಿಶಾ ಪಟಾನಿ ಜೊತೆ ನಟಿಸುತ್ತಿರುವುದರಿಂದ ಚಿತ್ರದಲ್ಲಿಯ ಅವರ ಕೆಮೆಸ್ಟ್ರಿ ಬಗ್ಗೆಯೂ ಸಿನಿಪ್ರೇಕ್ಷಕರಿಗೆ ಕುತೂಹಲ ಇರುತ್ತದೆ. ಇದು ಟೈಗರ್ ಶ್ರದ್ಧಾ ಕಪೂರ್ ಜೊತೆ ನಟಿಸಿದ್ದ `ಭಾಗಿ’ ಚಿತ್ರದ ಮುಂದುವರಿದ ಭಾಗವಾಗಿದ್ದು ಮೊದಲ ಚಿತ್ರವೂ ಬಾಕ್ಸಾಫೀಸಿನಲ್ಲಿ ಡೀಸೆಂಟ್ ಕಲೆಕ್ಷನ್ ಮಾಡಿತ್ತು.

ಚಿತ್ರಕ್ಕಾಗಿ ಟೈಗರ್ 5 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾನೆ. ಸಿನಿಮಾ ಎಪ್ರಿಲ್ 2018ರಲ್ಲಿ ತೆರೆಕಾಣಲಿದೆ.