ಫಲ್ಗುಣಿ ಸರ್ವೀಸ್ ಬಸ್ಸಿನಲ್ಲಿ ಟಿಕೆಟ್ ಕೊಡುವ ಕ್ರಮ ಇಲ್ಲ

ಮಂಗಳೂರು ಉಡುಪಿ ಮಧ್ಯೆ ಓಡಾಡುವ ಫಲ್ಗುಣಿ ಸರ್ವೀಸ್ ಬಸ್ಸಿನಲ್ಲಿ ಪ್ರಯಾಣಿಕರಿಗೆ ಟಿಕೆಟ್ ಕೊಡದೇ ಸತಾಯಿಸಲಾಗುತ್ತಿದೆ ಈ ಬಸ್ಸಿನಲ್ಲಿ ಇಂತಿಂಥ ಸ್ಥಳಕ್ಕೆ ಇಷ್ಟೇ ದರ ಎಂಬುದಿಲ್ಲ ಅವರು ಬರೆದು ಕೊಟ್ಟದ್ದು ನಾವು ಕೊಡಲೇಬೇಕು ಇನ್ನೊಂದೆಡೆ ಈ ಬಸ್ಸಿಗೆ ಖಾಯಂ ಕಂಡೆಕ್ಟರ್ ಎಂಬುದೇ ಇಲ್ಲ ವಾರಕ್ಕೊಬ್ಬರು ಬದಲಾಗುತ್ತಿರುತ್ತಾರೆ ಒಂದೊಂದು ದಿನ ಯೂನಿಫಾರ್ಮ್ ಹಾಕದ ವ್ಯಕ್ತಿ ಬಂದು ಪ್ರಯಾಣಿಕರಿಂದ ಟಿಕೆಟ್ ಟಿಕೆಟ್ ಹೇಳುತ್ತಾರೆ ಟಿಕೆಟ್ ಕೊಡಿ ಎಂದು ಕೇಳಿದರೆ ನಿಮಗೆ ಟಿಕೆಟ್ ಕೊಡಲೇ ಬೇಕಾ ಕೊಡುತ್ತೇನೆ ಎಂದು ಎಲ್ಲಿಯೋ ಬಿದ್ದುಕೊಂಡಿದ್ದ ಹರುಕು ಟಿಕೆಟನ್ನು ಹುಡುಕಾಡಿ ತಂದು ಅದರಲ್ಲಿ ಏನೋ ಗೀಚೀ ಬಿಸಾಡಿ ಹೋಗುತ್ತಾರೆ ನಾವು ಟಿಕೆಟಿಗೆ ಹಣ ಕೊಡುವಾಗ ಅವರ ಕೈಯಲ್ಲಿ ಕೊಡಬೇಕು ಟಿಕೆಟ್ ನೀಡುವಾಗ ಪ್ರಯಾಣಿಕರ ಎದುರಿಗೆ ಬಿಸಾಡಿ ಹೋಗುತ್ತಾರೆ ಇದು ಸರಿಯೇ ಕೈಯಲ್ಲಿ ಕೊಡುವಷ್ಟು ವ್ಯವಧಾನ ಇಲ್ಲದವರು ಯಾಕೆ ಕಂಡೆಕ್ಟರ್ ಕೆಲಸ ಮಾಡಬೇಕು ನಮ್ಮಂಥ ನೂರು ಜನರು ಈ ಬಸ್ಸಿನಲ್ಲಿ ಪ್ರಯಾಣಿಸಿದರೆ ಮಾತ್ರ ಈ ಬಸ್ ನಡೆಯಬಹುದು ಇಲ್ಲದಿದ್ದರೆ ಖಾಯಂ ಎಲ್ಲಿಯಾದರೂ ಸರ್ವೀಸ್ ಸ್ಟೇಷನ್ನಿನಲ್ಲಿ ಲಂಗಾರು ಹಾಕಬೇಕಾದೀತು ಪ್ರಯಾಣಿಕರೆಂದರೆ ಈ ಬಸ್ಸಿನವರಿಗೆ ಅಷ್ಟೊಂದು ಅಲರ್ಜಿ ಯಾಕೆ ಒಟ್ಟಿನಲ್ಲಿ ಜಿಲ್ಲಾಧಿಕಾರಿ ಆದೇಶ ಈ ಬಸ್ಸಿಗೆ ಅನ್ವಯವಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ ಅಂದು ಪೊಲೀಸ್ ವರಿಷ್ಠಾಧಿಕಾರಿ ಕೂಡ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದರೂ ಇದರ ಪಾಲನೆ ಎಲ್ಲಿಯೂ ಅನುಷ್ಠಾನ ಆಗುತ್ತಿಲ್ಲದಿರುವುದರಿಂದಲೇ ಮತ್ತೆ ಬಸ್ಸಿನಲ್ಲಿ ಟಿಕೆಟ್ ಕೊಡದೇ ಹಣ ಪಡೆಯುತ್ತಿದ್ದಾರೆ ಟಿಕೆಟ್ ಕೊಡದೇ ಹಣ ಕೊಡಬೇಡಿ ಎಂದು ಪೇಪರಿನಲ್ಲಿ ಹೇಳಿಕೆ ಕೊಡುವುದು ಸುಲಭ ಅದನ್ನು ಸರಿಯಾಗಿ ಪಾಲನೆ ಮಾಡುವುದು ಯಾರು ಕೂಡಲೇ ಈ ಬಸ್ಸಿನ ಪರ್ಮೀಟ್ ರದ್ದುಪಡಿಸಿ ಇದೇ ಸಮಯಕ್ಕೆ ಬೇರೊಂದು ಬಸ್ಸನ್ನು ಹಾಕಿ ಉಪಕಾರ ಮಾಡಬೇಕಿದೆ

  • ಶರತ್ ಸಾಲ್ಯಾನ್  ಕಾರ್ನಾಡ್ ಬೈಪಾಸ್