ಇಂಗ್ಲಿಷ್ ಮಾತನಾಡಿದ ಯುವಕಗೆ ಹಲ್ಲೆ ನಡೆಸಿದ ಮೂವರ ಬಂಧನ

 ನವದೆಹಲಿ : ಗೆಳೆಯನೊಂದಿಗೆ ನಿರರ್ಗಳ ಇಂಗ್ಲಿಷ್ ಮಾತನಾಡುತ್ತಿದ್ದ 22 ವರ್ಷದ ಯುವಕನೊಬ್ಬನಿಗೆ ಐವರು ಯದ್ವಾತದ್ವಾ ಹೊಡೆದ ಘಟನೆ ದಿಲ್ಲಿಯಲ್ಲಿ ನಡೆದಿದೆ. ಶನಿವಾರ ಬೆಳಿಗ್ಗೆ ಯುವಕ ತನ್ನ ಗೆಳೆಯನನ್ನು ದಿಲ್ಲಿಯ ಪಂಚತಾರಾ ಹೋಟೆಲೊಂದಕ್ಕೆ ಬಿಡಲು ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಆರೋಪಿಗಳಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದು, ಇತರ ಇಬ್ಬರಿಗಾಗಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.