ರಾಷ್ಟ್ರಧ್ವಜ ಹಾರಿಸದವರು, ರಾಷ್ಟ್ರಗೀತೆ ಹಾಡದವರು ದ್ರೋಹಿ : ಕಟಿಯಾರ್

 ಲಕ್ನೋ :  ರಾಜ್ಯದ ಎಲ್ಲಾ ಮದರಸಾಗಳೂ ಸ್ವಾತಂತ್ರ್ಯೋತ್ಸವ ಆಚರಿಸಿ ಸಮಾರಂಭದ ವೀಡಿಯೋ ಚಿತ್ರೀಕರಣ ನಡೆಸಬೇಕೆಂದು ಉತ್ತರ ಪ್ರದೇಶ ಸರಕಾರ ಆದೇಶಿಸಿದ ಬೆನ್ನಲ್ಲೇ ಬಿಜೆಪಿ ನಾಯಕ ವಿನಯ್ ಕಟಿಯಾರ್ ವಿವಾದಾತ್ಮಕ  ಹೇಳಿಕೆಯೊಂದನ್ನು ನೀಡಿ ಸರಕಾರದ ಆದೇಶವನ್ನು ಒಪ್ಪದೆ ರಾಷ್ಟ್ರಧ್ವಜ ಹಾರಿಸದೇ ಇರುವವರನ್ನು ಹಾಗೂ ರಾಷ್ಟ್ರಗೀತೆ ಹಾಡದವರನ್ನು ದೇಶದ್ರೋಹಿಗಳು ಎಂದು ಪರಿಗಣಿಸಬೇಕು ಎಂದಿದ್ದಾರೆ. ಯೋಗಿ ಆದಿತ್ಯನಾಥ್ ಅವರ ಆದೇಶವನ್ನು ಸಂಪೂರ್ಣವಾಗಿ ಬೆಂಬಲಿಸಿದ  ಕಟಿಯಾರ್, “ಅವರು (ಯೋಗಿ) ಸರಿಯಾದ ಕ್ರಮವನ್ನೇ ಕೈಗೊಂಡಿದ್ದಾರೆ. ಯಾವುದೇ ಶಾಲೆ, ಮದರಸಾ ಅಥವಾ ಬೇರೆ ಯಾವುದೇ ಸಂಘಟನೆಯಿರಲಿ, ರಾಷ್ಟ್ರಗೀತೆ ಹಾಡಲು ಒಪ್ಪದವರನ್ನು “ದೇಶದ್ರೋಹಿಗಳು” ಎಂದೇ ಪರಿಗಣಿಸಬೇಕು” ಎಂದಿದ್ದಾರೆ.