ಈ ವಾರವೂ ಆರು ಕನ್ನಡ ಚಿತ್ರ ತೆರೆಗೆ

ಕನ್ನಡದಲ್ಲೀಗ ಅದೆಷ್ಟು ಚಿತ್ರಗಳು ತೆರೆಕಂಡವೋ ಲೆಕ್ಕವೇ ಇಲ್ಲ. ಕೆಲವು ಚಿತ್ರಗಳು ಒಂದೆರಡು ದಿನ ಓಡಿದರೆ ಜಾಸ್ತಿ. ಮತ್ತೆ ಕೆಲವು ಒಂದು ವಾರ ಓಡಿದರೂ ಥಿಯೇಟರೆಲ್ಲವೂ ಬಣಬಣ. ಈ ವಾರವೂ ಆರು ಸಿನಿಮಾಗಳು ತೆರೆಕಾಣುತ್ತಿವೆ. ಅದರಲ್ಲಿ `ಪ್ರೇಮ ಬರಹ’ ಹಾಗೂ `ಸಂಹಾರ’ ಚಿತ್ರಗಳು ಹೆಚ್ಚು ಸುದ್ದಿಯಲ್ಲಿವೆ.

ಪ್ರೇಮ ಬರಹ : ಈ ಸಿನಿಮಾಗೆ ಅರ್ಜುನ್ ಸರ್ಜಾರೇ ಕ್ಯಾಪ್ಟನ್. ಅವರೇ ಈ ಸಿನಿಮಾವನ್ನು ತನ್ನ ಮಗಳಿಗಾಗಿಯೇ ನಿರ್ಮಿಸಿ ನಿರ್ದೇಶಿಸಿದ್ದಾರೆ. ಐಶ್ವರ್ಯಾ ಸರ್ಜಾ ಈ ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟಿದ್ದು ಆಕೆ `ಬಿಗ್ ಬಾಸ್’ ಖ್ಯಾತಿಯ ಚಂದನ್ ಜೊತೆ `ಪ್ರೇಮ ಬರಹ’ಕ್ಕೆ ಮುನ್ನುಡಿ ಬರೆದಿದ್ದಾಳೆ. ಸಿನಿಮಾದಲ್ಲಿ ಸುಹಾಸಿನಿ, ಪ್ರಕಾಶ್ ರಾಜ್, ಸಾಧು ಕೋಕಿಲಾ ಮೊದಲಾದವರು ಪಾತ್ರವರ್ಗದಲ್ಲಿದ್ದಾರೆ. ಚಿತ್ರದಲ್ಲಿ ಒಂದು ಆಂಜನೇಯನ ಕುರಿತಾದ ಹಾಡಿದ್ದು ಅದರಲ್ಲಿ ಅರ್ಜುನ್ ಸರ್ಜಾ ಸ್ವತಃ ತನ್ನ ಅಳಿಯಂದಿರಾದ ಚಿರಂಜೀವಿ ಸರ್ಜಾ, ಧ್ರುವ ಸರ್ಜಾ ಜೊತೆ ಸ್ಟೆಪ್ಸ್ ಹಾಕಿದ್ದಾರೆ. ಆ ಡ್ಯಾನ್ಸಿಗೆ ದರ್ಶನ್ ಕೂಡಾ ಸಾಥ್ ನೀಡಿದ್ದಾನೆ. ಚಿತ್ರ ತಮಿಳಿನಲ್ಲೂ ತೆರೆ ಕಾಣುತ್ತಿದೆ.

ಸಂಹಾರ : ಈ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸಿದ್ದು ಮಾವ ಅರ್ಜುನ್ ಸರ್ಜಾ ಚಿತ್ರದ ಜೊತೆ ನೇರ ಪೈಪೋಟಿಗಿಳಿದಿದ್ದಾನೆ. ಚಿತ್ರದಲ್ಲಿ ಚಿರಂಜೀವಿ ಅಂಧನ ಪಾತ್ರದಲ್ಲಿ ನಟಿಸಿದ್ದಾನೆ. ಹರಿಪ್ರಿಯಾ ಸಿನಿಮಾದಲ್ಲಿ ನಾಯಕಿ ಕಮ್ ವಿಲನ್. ಚಿಕ್ಕಣ್ಣನ ಕಾಮಿಡಿಯೂ ಚಿತ್ರದಲ್ಲಿದೆ. ಇವರ ಜೊತೆಗೆ ನಿರ್ಮಾಪಕ ವೆಂಕಟೇಶ್ ಅವರ ಪುತ್ರ ಮನುಗೌಡ ಕೂಡಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾನೆ. ಈ ಸಿನಿಮಾಗೆ ಗುರುದೇಶಪಾಂಡೇ ಅವರ ನಿರ್ದೇಶನವಿದೆ.

 

LEAVE A REPLY