ಈ ಸ್ಥಳವೀಗ ಸೆಲ್ಫೀ ಸ್ಪಾಟ್

ಕಲಾವಿದನ ಕುಂಚದಲ್ಲಿ ರೋಡ್ ರೋಲರಿಗೂ ಬಣ್ಣ

ನಮ್ಮ ಪ್ರತಿನಿಧಿ ವರದಿ
ಮಂಗಳೂರು : ಕಲಾವಿದನ ಕೈಯಲ್ಲಿ ಅದೇನೇ ವಸ್ತು ಸಿಕ್ಕರೂ ಅದೊಂದು ಅದ್ಭುತ ಕಲೆಯಾಗಿ ಸೃಷ್ಟಿಯಾಗುತ್ತೆ ಅನ್ನೋದು ಇದಕ್ಕೆ ನೋಡಿ ರಸ್ತೆ ದುರಸ್ತಿ ಪಡಿಸುವ ಅಥವಾ ಡಾಮರ್ ಹಾಕುವ ಸಂದರ್ಭದಲ್ಲಿ ಉಪಯೋಗಕ್ಕೆ ಬರುತ್ತಿದ್ದ ರೋಡ್ ರೋಲರ್ ಇದೀಗ ಕಣ್ಮರೆಯಾಗಿದೆ  ಹೀಗೆ ಉಪಯೋಗಕ್ಕೆ ಬಾರದ ಈ ರೋಡ್ ರೋಲರಿಗೆ ತನ್ನ ವಿಭಿನ್ನ ಕಲಾಕೃತಿಯ ಮೂಲಕ ಜೀವ ತುಂಬಿದ ಕಲಾವಿದ ಪ್ರದೀಪ್ ಕುಮಾರ್  ಇದೀಗ ಅದನ್ನು ಸೆಲ್ಫೀ ಸ್ಟಾಟ್ ಆಗಿ ಪರಿವರ್ತನೆ ಮಾಡಿದ್ದಾರೆ
ಮಂಗಳೂರಿನ ರಾಮಕೃಷ್ಣ ಮಠದ ವತಿಯಿಂದ ಕೈಗೊಂಡಿರುವ ಸ್ವಚ್ಛತಾ ಅಭಿಯಾನದ ಜೊತೆಗೆ ಕೈಜೋಡಿಸಿರುವ ಸಮಾಜಸೇವಕ, ಕಲಾವಿದ ಪ್ರದೀಪ್ ಕುಮಾರ್  ತ್ಯಜಿಸಿ ಬಿಟ್ಟಿದ್ದ ರೋಡ್ ರೋಲರಿಗೆ ಅದ್ಭುತ ವಿನ್ಯಾಸದ ಪೈಂಟಿಂಗ್ ಮಾಡುವ ಮೂಲಕ ಇದಕ್ಕೆ ಒಂದು ಭಿನ್ನಸ್ವರೂಪ ನೀಡಿದ್ದಾರೆ. ಇದೀಗ ಈ ಸೆಲ್ಪೀ ಸ್ಪಾಟ್ ಉದ್ಘಾಟನೆಗೊಳ್ಳುವ ಹಂತದಲ್ಲಿದೆ
ಕೇರಿಕ್ಯಾಚರ್  ಪೋಟ್ರೈಟ್ಸ್  ಕಾನ್ಸೆಫ್ಟ್ ಆಟ್ಸ್ ಅಂಡ್ ಕಾಮಿಕ್ಸ್ ಮೂಲಕ ವರ್ಣೋಧರ್ ನಾಮಾಂಕಿತದ ಪ್ರಖ್ಯಾತಿ ಹೊಂದಿರುವ ಕಲಾವಿದ ಪ್ರದೀಪ್ ಅವರು ನಗರದ ಜೆಪ್ಪು ಮಾರ್ಕೆಟ್ ಬಳಿ ಈ ನಿರುಪಯುಕ್ತ ರೋಡ್ ರೋಲರ್ ಕಂಡರು. ಕೂಡಲೇ ಇದಕ್ಕೊಂದು ಹೊಸ ಸ್ವರೂಪ ನೀಡಲು ನಿರ್ಧರಿಸಿ ಕುಂಚವನ್ನು ಕೈಗೆತ್ತಿಕೊಂಡರು  ರಾಮಕೃಷ್ಣ ಮಠದವರೊಂದಿಗೆ ಸಮಾಲೋಚನೆ ನಡೆಸಿ ಅದಕ್ಕೆ ಭಿನ್ನ ಸ್ವರೂಪದ ಪೈಂಟಿಂಗ್ ಮಾಡಿ ಅಲ್ಲಿ ಸೆಲ್ಫೀ ಸ್ಪಾಟ್ ಆಗಿ ಪರಿವರ್ತಿಸಲು ನಿರ್ಧರಿಸಿದರು. ಇದೀಗ ರೋಡ್ ರೋಲರ್ ವಿಭಿನ್ನ ಪೈಂಟ್ ಮೂಲಕ ಜನಾಕರ್ಷಣೆ ಪಡೆದು ಎಲ್ಲರನ್ನೂ ಆಕರ್ಷಿಸುತ್ತಿದೆ