ಇದು ಆಟದ ವೈರುಧ್ಯ

ಇತ್ತೀಚೆಗೆ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಎದುರು ಹೀನಾಯ ಸೋಲು ಅನುಭವಿಸಿದ್ದ ಭಾರತ ಕ್ರಿಕೆಟ್ ತಂಡದ ಆಟಗಾರರು ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿಂದ ವ್ಯಾಪಾರ ಟೀಕೆಗೆ ಗುರಿಯಾದರು ಆ ಟೂರ್ನಿಯ ಬಳಿಕ ಈಗ ಶ್ರೀಲಂಕಾ ನೆಲದಲ್ಲಿ ಶ್ರೀಲಂಕಾದ ಎದುರು ನಡೆದ ಟೆಸ್ಟ್ ಸರಣಿಯನ್ನು ವಶ ಮಾಡಿಕೊಂಡಿರುವ ಬ್ಲೂಬಾಯ್ಸಿಗೆ ಮೆಚ್ಚುಗೆಯ ಸುರಿಮಳೆ ಇದು ಆಟದ ವೈರುಧ್ಯ ಶ್ರೀಲಂಕಾದ ಎದುರಿನ ಬ್ಯಾಟಿಂಗ್ ಮತ್ತು ಬೌಲಿಂಗಿನಲ್ಲಿ ಸಮರ್ಥ ಪ್ರದರ್ಶನ ತೋರಿದ ಆಟಗಾರರು ಮೂರು ಟೆಸ್ಟುಗಳ ಸರಣಿಯಲ್ಲಿ ಎರಡೂ ಟೆಸ್ಟ್ ಪಂದ್ಯಗಳನ್ನು ದಾಖಲೆಯಾಗಿ ಗೆದ್ದುಕೊಂಡಿದ್ದಾರೆ ಸ್ಪಿನ್ನರುಗಳಾದ ರವೀಂದ್ರ ಜಡೇಜ ರವಿಚಂದ್ರನ್ ಅಶ್ವಿನ್ ಅವರ ಕೈಚಳಕ ಮೋಹಕ ಶಿಖರ್ ಧವನ್ ಚೇತೇಶ್ವರ ಪೂಜಾರ ಅಜಿಂಕ್ಯಾ ರಹಾನೆ ಅವರು ಬ್ಯಾಟಿಂಗಿನಲ್ಲಿಯೂ ಮಿಂಚಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ ಆ ಮೂಲಕ ಐಸಿಸಿಯ ಟೆಸ್ಟ್ ಪಟ್ಟಿಯಲ್ಲಿ ತನ್ನ ಮೊದಲನೇ ಸ್ಥಾನವನ್ನು ಮುಂದುವರಿಸಿಕೊಂಡು ಸಾಗುತ್ತಿರುವುದು ಗಮನಾರ್ಹ ಸಾಧನೆ

  • ಬಾಲಚಂದ್ರ ಅಮೀನ್  ಬಲ್ಮಠ