ನೀರಿಗಿಳಿಯುವ ಮುನ್ನ ಯೋಚಿಸಿ

ಮಂಗಳೂರು ಉಡುಪಿ ಜಿಲ್ಲೆಗಳಲ್ಲಿ ಬಾಲಕ ಬಾಲಕಿಯರು  ಯುವಕ-ಯುವತಿಯರು ನದಿ ಸಮುದ್ರ ಕಿನಾರೆಯಲ್ಲಿ ಬಲಿಯಾಗುತ್ತಿದ್ದಾರೆ ಉಳ್ಳಾಲ, ಪಣಂಬೂರು, ಕಾಪು, ಮರವಂತೆ, ಸಮುದ್ರ ವೀಕ್ಷಿಸಲು ಹೋಗಿ ದಾರುಣವಾಗಿ ಮರಣವನ್ನಪ್ಪುವ ಬಗ್ಗೆ ವರದಿಯಾಗುತ್ತಿವೆ ನೇತ್ರಾವತಿ ಕುಮಾರಧಾರಾ ಫಲ್ಗುಣಿ ಶಾಂಭವಿ ನಂದಿನಿ ನದಿ ತೀರದಲ್ಲಿ ಅಪಾಯವಿದ್ದರೂ ನೀರಿಗಿಳಿದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಉತ್ತರ ಕನ್ನಡದ ಮುರುಡೇಶ್ವರ ಗೋಕರ್ಣ ಮುಂತಾದೆಡೆಯ ಸಮುದ್ರತೀರ ಶರಾವತಿ ನದಿ ತಟದಲ್ಲಿಯೂ ಪ್ರಾಣ ಕಳೆದುಕೊಳ್ಳುತ್ತಾರೆ ಕೆಲವು ದೇವಸ್ಥಾನದ ಪುಷ್ಕರಣೆ ಕೆರೆ ನೋಡಲು ಹೋಗಿ ಪ್ರಾಣ ಹಾನಿಯಾಗುತ್ತಿವೆ ಸಾಕಷ್ಟು ಮುನ್ನೆಚರಿಕೆ ನಾಮಫಲಕಗಳಿದ್ದರೂ ಸ್ಥಳೀಯರು ಎಚ್ಚರಿಕೆ ನೀಡಿದರೂ ನೀರು ನೋಡಿ ಉನ್ಮಾದದಿಂದ ಈಜಾಡುವುದು ನದಿ ಸಮುದ್ರದ ದಡ ಬಿಟ್ಟು ನೀರಿಗೆ ಇಳಿಯುವುದು ದುಸ್ಸಾಹಸ ಯಾವುದೇ ಕ್ಷಣದಲ್ಲಿಯೂ ನೀರಿನ ಸೆಳೆತಕ್ಕೆ ಈಜಲೂ ಬರುತ್ತಿದ್ದರೂ ಸಿಲುಕುತ್ತಾರೆ ಶಾಲಾ ಕಾಲೇಜು ಸಂಘ ಸಂಸ್ಥೆಗಳ ಮೂಲಕ ಜನಜಾಗೃತಿ ಮೊಳಗಬೇಕು ಶಾಲಾ ಕಾಲೇಜು ವಿದ್ಯಾರ್ಥಿನಿಯರು ಅಕ್ಟೋಬರ್ ನವೆಂಬರ್ ಡಿಸೆಂಬರ್ ತಿಂಗಳಿನ ಶೈಕ್ಷಣಿಕ ಪ್ರವಾಸದ ವೇಳೆ ರಾಜ್ಯ ಸರಕಾರವು ಕಟ್ಟು ನಿಟ್ಟಿನ ಆದೇಶ ಹೊರಡಿಸಿ ನೀರಿಗಿಳಿಯದಂತೆ ಎಚ್ಚರಿಕೆ ನೀಡಬೇಕಾಗಿದೆ ದ ಕ ಮಂಗಳೂರು ಉಡುಪಿ ಜಿಲ್ಲಾಧಿಕಾರಿ ಪೊಲೀಸ್ ವರಿಷ್ಠಾಧಿಕಾರಿ ಅಗ್ನಿಶಾಮಕದಳ ಪ್ರವಾಸೋದ್ಯಮ ಇಲಾಖೆ ಧಾರ್ಮಿಕ ದತ್ತಿ ಇಲಾಖೆ ತಹಶೀಲ್ದಾರ್ ಅಸಿಸ್ಟೆಂಟ್ ಕಮೀಷನರ್ ವಿದ್ಯಾಂಗ ಉಪನಿರ್ದೇಶಕರು ಸಭೆ ಏರ್ಪಡಿಸಿ ಜನಜಾಗೃತಿ ಎಚ್ಚರಿಕೆ ಮೂಡಿಸಬಹುದೆ ಜನಪ್ರತಿನಿಧಿ ಶಾಸಕರು ಲೋಕಸಭಾ ಸದಸ್ಯರು ಜಿಲ್ಲಾ ಪಂಚಾಯತ್ ಅಧಿಕಾರಿಗಳು ಸದಸ್ಯರು ವಿಶೇಷ ಗಮನಹರಿಸಬೇಕಾಗಿದೆ ಪತ್ರಿಕೆಗಳ ಮೂಲಕ ದೂರದರ್ಶನ ಖಾಸಗಿ ವಾಹಿನಿಗಳ ಮುಖಾಂತರ ಪ್ರವಾಸದ ವೇಳೆ ಎಚ್ಚರಿಕೆ ಕ್ರಮ ಪೋಟೋಕಾಲ್ ನೀತಿ ಸಂಹಿತೆ ಅನುಕರಿಸಲು ಪ್ರಚಾರ ಮಾಡಬೇಕು ಅಮಾಯಕರು ಮುಗ್ಧರು ನೀರಿಗಿಳಿದು ಪ್ರಾಣ ಕಳೆದುಕೊಳ್ಳಬಾರದು ಸಮುದ್ರ ನದಿ ಕೆರೆ ವೀಕ್ಷಿಸುವುದಷ್ಟೇ ಸೀಮಿತ ಆಗಿರಬೇಕು ನೀರಿಗಿಳಿಯಬಾರದು ನೀರು ಆಕರ್ಷಿಸಲ್ಪಟ್ಟರೂ ವೀಕ್ಷಿಸಿ ಆನಂದಿಸಬೇಕು ಜಿಲ್ಲಾಡಳಿತ ಪ್ರತಿಬಂಧಕ ಆದೇಶ ಪ್ರಕಟಿಸುವಂತಾಗಲಿ

  • ಕೆ ಸಿ ನಾಗರಾಜ  ಪುತ್ತೂರು