ಹೆತ್ತವರು ಸಣ್ಣ ಪ್ರಾಯದವರಿಗೆ ಬೈಕ್ ಕೊಡಿಸುವ ಮುನ್ನ

ದಿನ ಬೆಳಗಾದರೆ ಪತ್ರಿಕೆ  ಟೀವಿ ನೋಡಿದ ಕೂಡಲೇ ಅಪಘಾತಗಳ ಸರಮಾಲೆಯೇ ಕಣ್ಣ ಮುಂದೆ ಎದುರು ಬರುತ್ತಿದೆ  ಸಣ್ಣ ಪ್ರಾಯದವರೇ ಬೈಕುಗಳಲ್ಲಿ ಹೋಗಿ ಪ್ರಾಣ ಕಳಕೊಳ್ಳುತ್ತಿದ್ದಾರೆ  ಈ ಹುಡುಗರಿಗೆ ಬುದ್ಧಿ ಹೇಳುವವರಾರೂ ಇಲ್ಲವೇ   ಈ ಹುಡುಗರಿಗೆ ಬೈಕ್ ಏರಿದೊಡನೆಯೇ ಏನಾಗುತ್ತದೆಯೋ ಗೊತ್ತಿಲ್ಲ  ಅದಕ್ಕೆ ಸರಕಾರ 22 ವರ್ಷದ ನಂತರ ಚಾಲನಾ ಲೈಸೆನ್ಸ್ ನೀಡಬೇಕೆಂದು ಆದೇಶ ನೀಡಬೇಕು  ಕಟ್ಟು ನಿಟ್ಟಾಗಿ ಸರಕಾರ ಇದನ್ನು ಮಾಡಲೇಬೇಕು  ಇಲ್ಲದಿದ್ದರೆ ಇಂತಹ ದುರಂತ ಕಾಣಲೇಬೇಕು  ಹೆತ್ತವರೂ ಬೈಕ್ ಕೊಡಿಸುವ ಮುನ್ನ ಯೋಚಿಸಿ  ಮತ್ತೆ ಪಶ್ಚಾತ್ತಾಪ ಪಡಬೇಡಿ

  • ಮರಾರಿ ಪುತ್ತೂರು