ಅಂಗಡಿಗಳಿಗೆ ನುಗ್ಗಿದ ಕಳ್ಳರು : 1.30 ಲಕ್ಷ ರೂ ಸೊತ್ತು ಕಳವು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಬದ್ರಿಯಾ ಜಂಕ್ಷನ್ ಸಮೀಪದ ಅಡಿಕೆ ವ್ಯಾಪಾರದ ಅಂಗಡಿ ಮತ್ತು ಟೈಲ್ಸ್ ಸಂಗ್ರಹ ಮಳಿಗೆಗೆ ನುಗ್ಗಿದ ಕಳ್ಳರು ಸುಮಾರು 1 ಲಕ್ಷ 30 ಸಾವಿರ ರೂ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ.

ಸೆಪ್ಟೆಂಬರ್ 13ರಂದು ಈ ಕೃತ್ಯ ನಡೆದಿದ್ದು, ಗುರುವಾರ ಮುಂಜಾನೆ ಬೆಳಕಿಗೆ ಬಂದಿದೆ.ಸಹಯೋಗ್ ಟ್ರೇಡರ್ಸ್ ಅಂಗಡಿಗೆ ಅಳವಡಿಸಿದ ಕಿಟಕಿಯನ್ನು ತೆಗೆದು ಒಳಗೆ ನುಗ್ಗಿದ ಕಳ್ಳರು 60 ಕೇಜಿ ತೂಕದ 8 ಚೀಲ ಅಡಿಕೆ ಕಳವು ಮಾಡಿದ್ದರೆ, ಪಕ್ಕದ ಟೈಲ್ ಗೋದಾಮು ಶಟರ್ ಮುರಿದು ಒಳನುಗ್ಗಿ ಸೀಸಿ ಕೆಮರಾ, ಮೋನಿಟರ್, ಡಿವಿಆರ್ ಕದ್ದುಕೊಂಡು ಹೋಗಿದ್ದಾರೆ. ಇವುಗಳ ಒಟ್ಟು ಮೌಲ್ಯ ಲಕ್ಷ ರೂ ಎಂದು ಅಂದಾಜಿಸಲಾಗಿದೆ.