ಅಂಗಡಿಗೆ ಖರೀದಿ ನೆಪದಲ್ಲಿ ಬಂದು 1 ಲಕ್ಷ ರೂ ಕಳವು

ನಮ್ಮ ಪ್ರತಿನಿಧಿ ವರದಿ

ಶಿರಸಿ : ಖರೀದಿ ನೆಪದಲ್ಲಿ ಬಂದ ಇಬ್ಬರು ಕಳ್ಳರು ಅಂಗಡಿ ಮಾಲಿಕನ ಲಕ್ಷ್ಯ ಬೇರೆಡೆ ಸೆಳೆಯುವಂತೆ ಮಾಡಿ ಅಂಗಡಿಯ ಡ್ರಾವರಿನಲ್ಲಿದ್ದ 1.30 ಲಕ್ಷ ರೂ ನಗದನ್ನು ಕದ್ದು ಪರಾರಿಯಾದ ಘಟನೆ ಮಂಗಳವಾರ ಸಂಜೆ ನಿಲೇಕಣಿ ಸಮೀಪ ನಡೆದಿದೆ.

ರವಿ ಹೆಗಡೆ ಎಂಬವರಿಗೆ ಸೇರಿದ್ದ ನಿಲೇಕಣಿಯ ಅಕ್ಷತ ಟ್ರೇಡರ್ಸಿಗೆ ಕಳ್ಳರಿಬ್ಬರು ಬಂದು ಡ್ರಾವರಿಲ್ಲಿದ್ದ ಹಣ ಲಪಟಾಯಿಸಿ ಪರಾರಿಯಾಗಿದ್ದಾರೆ. ಅಂಗಡಿಗೆ ಬಂದ ಇಬ್ಬರಲ್ಲಿ ಒಬ್ಬ ರೂ 2 ಸಾವಿರಕ್ಕೆ ಚೇಂಜ್ ಕೊಡಿ ಎಂದು ಕೇಳಿದ್ದಾನೆ. ಆಗ ಡ್ರಾವರಿನಲ್ಲಿದ್ದ ಲಕ್ಷಾಂತರ ರೂ ನೋಡಿದ ಅವರು ಪ್ಲಾನ್ ಮಾಡಿ ಒಬ್ಬ ತಮಗೆ ಕಡಪಾ ಬೇಕು ಎಂದು ಹೇಳಿದ್ದಾನೆ. ಮಾಲಕನು ಕಡಪ ಕಲ್ಲು ತೋರಿಸಲು ಅಂಗಡಿ ಹಿಂಬದಿ ಹೋಗಿ ವ್ಯಕ್ತಿ ಜತೆ ಮಾತನಾಡುತ್ತಿರುವಾಗ ಇನ್ನೊಬ್ಬ ಅಂಗಡಿಯ ಡ್ರಾವರಿನಲ್ಲಿದ್ದ 1.30 ಲಕ್ಷ ರೂ ನಗದನ್ನು ಸ್ಕೂಡ್ರೈವರ್ ಬಳಸಿ ಎಗರಿಸಿ ಸ್ವಲ್ಪ ಮುಂದೆ ಹೋಗಿ ಮಾಲಕನ ಜೊತೆ ಮಾತನಾಡುತ್ತಿದ್ದವನಿಗೆ `ಕೆಲಸ ಮುಗಿಯಿತು’ ಎಂದು ಪೆÇೀನ್ ಮಾಡಿದ್ದಾನೆ. ಆತ “ಪೆÇೀನ್ ಬಂದಿದೆ, ಐದು ನಿಮಿಷದಲ್ಲಿ ಬಂದೆ” ಎಂದು ಮುಂದೆ ಸಾಗಿ ಇಬ್ಬರು ಕಾರು ಹತ್ತಿ ಪರಾರಿಯಾಗಿದ್ದಾರೆ.

ಅಂಗಡಿ ಮಾಲಿಕ ರವಿ ಹೆಗಡೆ ಸ್ವಲ್ಪ ಹೊತ್ತು ಬಿಟ್ಟು ಬಂದು ನೋಡಿದಾಗ ಡ್ರಾವರ್ ಓಪನ್ ಆಗಿದ್ದು ಗಮನಕ್ಕೆ ಬಂದಿದೆ. ಸಂಜೆ ಹೊತ್ತು ಜನಸಂಚಾರ ಇರುವಾಗಲೇ ವ್ಯಾಪಾರದ ಸೋಗಿನಲ್ಲಿ ಬಂದ ಇಬ್ಬರು ಎಸ್ಕೇಪ್ ಆಗಿದ್ದಾರೆ. ಅಂಗಡಿ ಮಾಲಿಕ ಹಣ ಕಳವಾದ ಬಗ್ಗೆ ಪೆÇಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದು ನಗರದ ಅಂಗಡಿಕಾರರ ವಲಯದಲ್ಲೂ ಆತಂಕ ಮೂಡಿಸಿದೆ.

LEAVE A REPLY