17 ಪವನ್ ಚಿನ್ನ ಕಳವು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಮನೆಯೊಂದಕ್ಕೆ ನುಗ್ಗಿದ ಕಳ್ಳರು 17 ಪವನ್ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಎರ್ದುಂಕಡವು ನಿವಾಸಿ ಮೊಯ್ದೀನ್ ಎಂಬವರ ಮನೆಯಿಂದ ಕಳವು ನಡೆದಿದೆ. ಸಮೀಪದ ಮಸೀದಿಯಲ್ಲಿ ಧಾರ್ಮಿಕ ಪ್ರವಚನ ಕಾರ್ಯಕ್ರಮಕ್ಕೆ ಗುರುವಾರ ಮನೆಯವರು ತೆರಳಿದ ಸಂದರ್ಭ ಕಳವು ನಡೆದಿದೆ. ಮನೆಯಲ್ಲಿ ಒಬ್ಬ ಮಹಿಳೆ ಮಾತ್ರ ಇದ್ದರು. ಆದರೆ ಅವರಿಗೆ ಕಳವು ಬಗ್ಗೆ ಅರಿವಿಗೆ ಬಂದಿರಲಿಲ್ಲ. ಕಪಾಟಿನ ಮೇಲೆರಿಸಿದ ಕೀಲಿಕೈ ತೆಗೆದು ಕಳ್ಳರು ಚಿನ್ನಾಭರಣ ಕಳವು ನಡೆಸಿದ್ದಾರೆ. ಈ ಬಗ್ಗೆ ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.